ಎಎಪಿ ಜಿಲ್ಲಾಧ್ಯಕ್ಷರಾಗಿ ಮಾಲಗಾರ ನೇಮಕ

ಬಸವಕಲ್ಯಾಣ:ಎ.23: ಆಮ್ ಆದ್ಮಿ ಪಕ್ಷ (ಎಎಪಿ)ದ ಜಿಲ್ಲಾ ಘಟಕ ಅಧ್ಯಕ್ಷರನ್ನಾಗಿ ಇಲ್ಲಿನ ದೀಪಕ ಮಾಲಗಾರ ಅವರನ್ನು ನೇಮಿಸಲಾಗಿದೆ.

ಪಕ್ಷದ ಸಂಘಟನೆಗೆ ಹಲವಾರು ವರ್ಷಗಳಿಂದ ಶ್ರಮಿಸುತ್ತಿರುವ ಇವರನ್ನು ಈ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಬೀದರ್ ನಗರಸಭೆ ಚುನಾವಣೆಯ ಜವಾಬ್ದಾರಿ ಕೂಡ ಇವರಿಗೆ ವಹಿಸಲಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿರೆಡ್ಡಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.