ಎಎಪಿ ಅಭ್ಯರ್ಥಿ ಡಾ.ಸುಭಾಷ್ ಚಂದ್ರುಗೆ ಡೊಳ್ಳು ನೊಂದಿಗೆ ಭರ್ಜರಿ ಸ್ವಾಗತ

ರಾಯಚೂರು,ಏ.೧೨- ರಾಯಚೂರು ಗ್ರಾಮೀಣ ಮತ ಕ್ಷೇತ್ರದ ನದಿ ದಂಡೆ ಹಾಗೂ ಗಡಿ ಗ್ರಾಮಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಬಾಜಿ ಅವರಿಗೆ ಕಳಸ ಡೊಳ್ಳುನೊಂದಿಗೆ ಭರ್ಜರಿ ಸ್ವಾಗತಿಸಿ ಕೊಂಡರು.
೨೦೨೩ರ ವಿಧಾನ ಸಭೆ ಚುನಾವಣೆ ಅಂಗವಾಗಿ ಎ.ಎ.ಪಿ.ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಬಾಜಿ ಅವರು ಗಡಿ ಭಾಗದ ಹಳ್ಳಿಗಳಾದ ಬುಡದಿನ್ನಿ ,ಗಿಲ್ಲೇಸೂಗೂರು, ತುಂಗಭದ್ರಾ ಗ್ರಾಮಗಳಿಗೆ ತೆರಳಿದರು ಅದ್ದೂರಿ ಸ್ವಾಗತಿಸಿ ಕೊಂಡು ಬೆಂಬಲ ಸೂಚಿಸಿದರು.
ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡುತ್ತಾ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮುನ್ನಾ ಮಾಡಲಾಗುತ್ತದೆ ಎರಡು ನದಿಗಳ ಮಧ್ಯ ಗ್ರಾಮೀಣ ಕ್ಷೇತ್ರವಿದ್ದರು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕೊರತೆ.
ನಾನು ಶಾಸಕನಾಗಿ ಅರಿಸಿ ಬಂದರೆ ರಾಯಚೂರು ತಾಲೂಕಿನ ಸಂಪೂರ್ಣ ನೀರಾವರಿ ಮಾಡುತ್ತಿವೆಂದು ಡಾ.ಸುಭಾಷ್ ಚಂದ್ರ ಸಂಬಾಜಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎ.ಎ.ಪಿ.ಮುಖಂಡರಾದ ಕೆ.ಬಸವಂತಪ್ಪ .ರತ್ನಾಕರ್. ಸುಗಪ್ಪ ಲಕ್ಷ್ಮಣ ಭಜಂತ್ರಿ ಕರೆಮ್ಮ.ಶಾಂತಮ್ಮ. ಹಾಗೂ ನೂರಾರು ಯುವಕರು .ಯುವತಿಯರು. ಮಹಿಳೆಯರು ಮುಂತಾದವರು ಭಾಗವಹಿಸಿದ್ದರು.