ಎಇಸಿಸ್ ವಾರ್ಡ್ ಕಚೇರಿ ಉದ್ಘಾಟನೆ

ಕೆ.ಆರ್.ಪುರ, ಏ.೬- ಮಹದೇವಪುರದ ಕ್ಷೇತ್ರದ ಎಇಸಿಎಸ್ ವಾರ್ಡ್ ಕಚೇರಿಯನ್ನು ಶಾಸಕ ಎಚ್.ನಾಗೇಶ್ ಅವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ನಾಗೇಶ್ ಅವರು ಕ್ಷೇತ್ರದಲ್ಲಿ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಮುಂದಿನ ದಿನಗಳಲ್ಲಿ ಮಾಡುತ್ತೆನೆ ಎಂದು ತಿಳಿಸಿದರು.
ಮಹದೇವಪುರ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹಾಗೂ ಜನತೆಗೆ ಸೇವೆ ಸಲ್ಲಿಸಲು ಆಶಿರ್ವಾದಿಸುವಂತೆ ಮನವಿ ಮಾಡಿದರು.
ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಿದ್ದು ಹಂತಹಂತವಾಗಿ ಅಭಿವೃದ್ಧಿಪಡಿಸುವ ಕಾರ್ಯ ಪಡಿಸಲಾಗುವುದು ಎಂದರು.
ವಾರ್ಡ್ ಸಮಸ್ಯೆಗಳ ಬಗ್ಗೆ ಪಟ್ಟಿ ಸಿದ್ದಪಡಿಸಲಾಗಿದ್ದು ಸಮಸ್ಯೆಗಳನ್ನು ಪರಿಹರಿಸುವ ಮೂಲಕ ವಾರ್ಡ್ ನ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕೆಪಿಸಿಸಿ ಸದಸ್ಯ ಜಯರಾಂ ರೆಡ್ಡಿ, ಆಯೋಜಕ ಕೆ.ಪಿ.ಆರ್.ಗುರು, ಬ್ಲಾಕ್ ಕಾಂಗ್ರೆಸ್ ಪಣತ್ತೂರು ಬಾಬುರೆಡ್ಡಿ,ಮಹಿಳಾ ಬ್ಲಾಕ್ ಅಧ್ಯಕ್ಷೆ ವನಜಾರೆಡ್ಡಿ, ವಾರ್ಡನ ಅಧ್ಯಕ್ಷ ಅಶೋಕ್,ಮುಖಂಡರಾದ ಸತೀಶ್ ಪಣಿಕರ್,ವಾರ್ಡನ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಸುದ್ದಿ ಚಿತ್ರ: ಮಹದೇವಪುರದ ಕ್ಷೇತ್ರದ ಎಇಸಿಎಸ್ ವಾರ್ಡ್ ಕಚೇರಿಯನ್ನು ಶಾಸಕ ಎಚ್.ನಾಗೇಶ್ ಅವರು ಉದ್ಘಾಟಿಸಿದರು. ಕೆಪಿಸಿಸಿ ಸದಸ್ಯ ಜಯರಾಮರೆಡ್ಡಿ,ಮುಖಂಡರಾದ ಕೆ.ಪಿ.ಆರ್ ಗುರು ಇದ್ದರು.