ಎಆರ್ ಕೆಗೆ 59 ಸಾವಿರ ಅಂತರದ ಗೆಲುವು: ಮಹೇಶ್‍ಗೆ ಹೀನಾಯ ಸೋಲು

ಚಾಮರಾಜನಗರ, ಮೇ. 14:- ಧ್ರುವನಾರಾಯಣ ವಿರುದ್ಧ 1 ಮತದಅಂತರದಿಂದ ಸೋತ ಬಳಿಕ ನಿರಂತರವಾಗಿ ಸೋಲು ಅನುಭವಿಸಿದ್ದ ಎ.ಆರ್.ಕೃಷ್ಣಮೂರ್ತಿಗೆ ಕೊಳ್ಳೇಗಾಲದ ಮತದಾರರು ಭರ್ಜರಿ ಗೆಲುವನ್ನೇ ಕೊಟ್ಟಿದ್ದಾರೆ.
ಹಾಲಿ ಬಿಜೆಪಿ ಶಾಸಕ ಎನ್.ಮಹೇಶ್ ವಿರುದ್ಧ ಎ.ಆರ್.ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ನಿರಂತರ ಸೋಲಿಗೆ ಫುಲ್ ಸ್ಟಾಪ್ ಇಟ್ಟು ರಾಜಕೀಯದಲ್ಲಿ ಮತ್ತೇ ಮೇಲೆದ್ದಿದ್ದಾರೆ.
ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಎ.ಆರ್.ಕೆಗೆ ಈ ಗೆಲುವು ಹೊಸತನವನ್ನು ಕೊಟ್ಟಿದ್ದು 1 ಮತದ ಸೋಲನ್ನು ಈ ಭರ್ಜರಿ ಗೆಲುವು ಮರೆಸಿದೆ.
ಮಹೇಶ್‍ಗೆ ಹೀನಾಯ ಸೋಲು: ಜಿಲ್ಲೆಯಲ್ಲಿ ಅಧಿಕ ಮತಗಳ ಅಂತರದಿಂದ ಸೋಲುಂಡ ಶಾಸಕರಾಗಿ ಮಹೇಶ್ ಇದ್ದು ಭರ್ತಿ 59 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದಾರೆ. ಬಿಎಸ್ಪಿಯಿಂದ ಬಿಜೆಪಿಗೆ ತೆರಳಿದ ಬಳಿಕ ತಾಲೂಕಿನಲ್ಲಿ ಉಂಟಾದ ವಿರೋಧ ಮತಪೆಟ್ಟಿಗೆಯಲ್ಲಿ ತೋರಿದೆ.
ಎ.ಆರ್.ಕೃಷ್ಣಮೂರ್ತಿಗೆ ಅನುಕಂಪ, ಬಿಎಸ್ಪಿ ಬೆಂಬಲ, ಕಾಂಗ್ರೆಸ್ ಗೆ ಹಲವರ ಸೇರ್ಪಡೆ ಕೈ ಗೆಲುವಿಗೆ ಸಹಕಾರವಾಗಿದ್ದು ಮಹೇಶ್ ಅವರಿಗೆ ವ್ಯಾಪಾಕ ಆಡಳಿತ ವಿರೋಧಿ ನೀತಿ ಮತ ಪೆಟ್ಟಿಗೆಯಲ್ಲಿ ಕೆಲಸ ಮಾಡಿದೆ.
ಫೈಟ್ ಕೊಡದ ಪೆÇಲೀಸ್ ಇನ್ಸ್‍ಪೆಕ್ಟರ್: ಪೆÇಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಧುಮುಕಿ ಜೆಡಿಎಸ್‍ನಿಂದ ಕಣಕ್ಕಿಳಿದಿದ್ದ ಬಿ.ಪುಟ್ಟಸ್ವಾಮಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ಸವಾಲು ಒಡ್ಡಿಲ್ಲ. ಕೇವಲ 3925 ಮತಗಳಿಗμÉ್ಟೀ ತೃಪ್ತಿಪಟ್ಟುಕೊಂಡಿದ್ದಾರೆ.