ಎಆರ್‌ಸಿ ತಂತ್ರಜ್ಞಾನದಿಂದ ಹೆಚ್ಚು ಬೀಜೋತ್ಪಾದನೆ-ರವೀಂದ್ರನಾಥರೆಡ್ಡಿ

ಕೋಲಾರ ನ,೧೪-ಬೀಜೋತ್ಪಾದನೆಗೆ ಎಆರ್‌ಸಿ (ಎಪಿಕಲ್ ರೂಟೆಡ್ ಕಟಿಂಗ್ಸ್/ಂಠಿiಛಿಚಿಟ ಖooಣeಜ ಅuಣಣiಟಿgs) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಕಡಿಮೆ ಸಮಯದಲ್ಲಿ ಹೆಚ್ಚು ಬೀಜೋತ್ಪಾದನೆ, ದೊಡ್ಡ ವ್ಯಾಪ್ತಿಯಲ್ಲಿ ಬೆಳವಣಿಗೆಗೆ ಅವಕಾಶ ಸಿಗುತ್ತದೆ. ರವೀಂದ್ರನಾಥರೆಡ್ಡಿ
ನವೆಂಬರ್ ೧೨ ರಂದು ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಆಲೂಗಡ್ಡೆ ಅಂಗಾಂಶ ಗಿಡದ ಕಡ್ಡಿಗಳಿಂದ ಸಸ್ಯಾಭಿವೃದ್ಧಿ ಹಾಗೂ ಬೀಜೋತ್ಪಾದನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೀಜೋತ್ಪಾದನೆಯಲ್ಲಿ ೩ ವಿಧಗಳಿವೆ, ಅವುಗಳೆಂದರೆ ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಉತ್ಪಾದನೆ, ಪಾಲಿ ಮನೆಯಲ್ಲಿ ಚಿಗುರು ಕಡ್ಡಿಗಳ ಉತ್ಪಾದನೆ ಮತ್ತು ಜಮೀನಿನಲ್ಲಿ ಗಡ್ಡೆಗಳ ಉತ್ಪಾದನೆ ಮಾಡಲಾಗುವುದು ಎಂದು ತಿಳಿಸಿದರು.
ಚಿಗುರು ಕಡ್ಡಿಗಳ ಉತ್ಪಾದನೆ ಪ್ರತಿ ತಾಯಿ ಸಸ್ಯಗಳು ೪ ತಿಂಗಳವರೆಗೂ ಚಿಗುರುಗಳನ್ನು ನೀಡುತ್ತದೆ. ಪ್ರೊಟ್ರೆಗೆ ಹಾಕಿದಂತಹ ಚಿಗುರು ಕಡ್ಡಿಗಳು ೧೫-೨೦ ದಿನಗಳಲ್ಲಿ ಬೇರೂರಿ ಜಮೀನಿನಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ. ದಾವಣಗೆರೆ ಖಾಸಗಿ ಕಂಪನಿಯೊಬ್ಬರು ಆಲೂಗಡ್ಡೆ ಅಂಗಾಂಶ ಗಿಡದ ಸಸಿಗಳು ದೊರಕುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ರೈತರಿಗೆ, ಅಧಿಕಾರಿಗಳಿಗೆ ಮತ್ತು ವಿಜ್ಞಾನಿಗಳಿಗೆ ಮಾಹಿತಿ ನೀಡಿದರು.
ಆಲೂಗಡ್ಡೆ ಬೇಸಾಯ, ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಉಪ ನಿರ್ದೇಶಕರಾದ ಗಾಯತ್ರಿ, , ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರುಗಳಾದ ಬಿ.ಜಿ ಪ್ರಕಾಶ್, ಕೃಷಿ ವಿಜ್ಞಾನ ಕೇಂದ್ರದ ಡೀನ್ ಕೆ ತುಳಸಿರಾಮ್, ವಿಜ್ಞಾನಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತರು ಹಾಗೂ ಹಸಿರು ಸೇನೆ ರೈತರು ಸಹ ಭಾಗವಹಿಸಿದ್ದರು.