ಎಆರ್‌ಬಿಸಿ ಕಾಲುವೆ : ವಾರಬಂಧಿ ಪದ್ಧತಿ ಕೈಬಿಡಿ

ದೇವದುರ್ಗ.ಡಿ.೦೫- ತಾಲೂಕಿನ ಜೀವನಾಡಿಯಾದ ನಾರಾಯಣಪುರ ಬಲದಂಡೆ ಕಾಲುವೆ. ನೀರನ್ನು ನಂಬಿಕೊಂಡು ಇಲ್ಲಿನ ಸಾವಿರಾರು ಹೆಕ್ಟರ್‌ನಲ್ಲಿ ಮೆಣಸಿನಕಾಯಿ, ಸೂರ್ಯಕಾಂತಿ, ಹತ್ತಿ, ಶೇಂಗಾ ಬೆಳೆದ ರೈತರಿಗೆ. ವಾರಬಂಧಿ ಪದ್ಧತಿಯಿಂದ ನೀರು ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಕೊನೆ ಭಾಗದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ವಾರಬಂದಿ ಕೈಬಿಟ್ಟು ಹೆಚ್ಚುವರಿಯಾಗಿ ಎರಡು ದಿನ ಕಾಲ ನೀರು ಹರಿಸಿ. ಒಣಗುತ್ತಿರುವ ಮೆಣಸಿನಕಾಯಿ ಸೂರ್ಯಕಾಂತಿ ಹತ್ತಿ ಶೇಂಗಾ ಬೆಳೆಗಳಿಗೆ ಪುನಃಚೇತನ ನೀಡಿ ರೈತರಿಗೆ ಸಂಕಷ್ಟದಿಂದ ಪಾರು ಮಾಡಬೇಕೆಂದು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ ಹೇಳಿದರು.
ಸ್ಥಳೀಯ ಸಿರವಾರ ಕ್ರಾಸಿನಲ್ಲಿ ರಾಜ್ಯ ಹೆದ್ದಾರಿ ತಡೆದು ಭಾನುವಾರ ಚಳುವಳಿಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ೧೫ ೧೬ ೧೭ ೧೮ ಡಿಸ್ಟ್ರಿಬ್ಯೂಟರ್ ಹಾಗೂ ಕೊನೆಯ ಭಾಗದ ರೈತರಿಗೆ ನೀರಾವರಿ ಅಧಿಕಾರಿಗಳು ಜಾರಿಗೆ ತಂದ ವಾರಬಂಧಿ ಪದ್ಧತಿಯನ್ನು ಕೈಬಿಟ್ಟು, ಕೂಡಲೇ ಹೆಚ್ಚುವರಿಯಾಗಿ ಬಲದಂಡೆ ಕಾಲುವೆಗೆ ನೀರು ಹರಿಸುವ ಮೂಲಕ ರೈತರ ಬೆಳೆ ರಕ್ಷಣೆ ಮಾಡಬೇಕು. ಅಲ್ಲದೆ, ಬಾಲದಂಡೆ ಕಾಲುವೆಗೆ. ೮. ೧೨. ೨೦೨೧ ರಿಂದ ೧೭ .೩.ರವರಿಗೆ ನೀರು ಬಿಡುವುದಾಗಿ. ನೀರಾವರಿ ಸಲಹಾ ಸಮಿತಿ ತೀರ್ಮಾನಿಸಲಾಗಿದೆ.
ಆದರೆ, ಇಲ್ಲಿನ ಅಧಿಕಾರಿಗಳು ಕೇವಲ ಭತ್ತ ಬೆಳೆಯುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರಬಂದಿ ಪದ್ಧತಿಯಲ್ಲಿ ಕಾಲುವೆಗೆ ನೀರು ಹರಿಸಿ ಶೇಂಗಾ, ಸೂರ್ಯಕಾಂತಿ, ಹತ್ತಿ, ಮೆಣಸಿನಕಾಯಿ ಬೆಳೆದ ರೈತರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು. ೨೪. ೧೧. ೨೦ ೨೧ಕ್ಕೆ ನೀರು ಬಂದು ಮಾಡಿದ್ದು. ಪುನ ೮.೧೨. ಕ್ಕೆ ನೀರು ಬಿಟ್ಟರೆ. ಕೊನೆಯ ಭಾಗದ ರೈತರು ಜಮೀನುಗಳಿಗೆ. ನೀರು ತಲುಪಲು ಹದಿನೇಳು ದಿನಗಳ ಕಾಲ ಕಾಯಬೇಕಾಗುತ್ತದೆ. ಇದರಿಂದ ಹಿಂಗಾರು ಬೆಳೆಗಳು.ಸಂಪೂರ್ಣ ನಾಶವಾಗುತ್ತಿದ್ದು, ರೈತಾಪಿ ವರ್ಗ ಮತ್ತು ಸಾಲದ ಸುಳಿಯಲ್ಲಿ ಸಿಲುಕುವಂತೆ ಆಗುತ್ತಾರೆ.
ನೀರಾವರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು. ಕೂಡಲೇ ಗಮನ ಹರಿಸಿ. ಹೆಚ್ಚುವರಿಯಾಗಿ ನೀರು ಹರಿಸುವ ಮೂಲಕ. ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ. ಕ್ರಮಕೈಗೊಳ್ಳಬೇಕು ಎಂದು. ಒತ್ತಾಯಿಸಿದರು. ಇಲ್ಲದೆ ನಿರ್ಲಕ್ಷ ವೈಸಿ ವಾರ ಪದ್ಧತಿಯನ್ನು ಮುಂದುವರಿಸಿದರೆ. ಮುಂದಿನ ದಿನಮಾನಗಳಲ್ಲಿ ನೀರಾವರಿ ಕಚೇರಿಗೆ. ಬೀಗ ಜಡಿದು ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಅಧಿಕಾರಿಗಳಾದ ಅಂಬರೀಶ ಮೇಟಿ, ಈರಣ್ಣ, ಪ್ರಭಾಕರ ಪಾಟೀಲ್ ಇಂಗಳದಾಳ, ಬುಡನಗೌಡ ಜಾಟಗಲ್, ಭೀಮಸೇನರಾವ್, ಮಲ್ಲಪ್ಪ ಪೂಜಾರಿ, ಹಾಜಿ ಮಸ್ತಾನ್ ಗಣೇಕಲ್, ಶರಣಪ್ಪ, ಸಾಬಣ್ಣ ಸುಂಕೇಶ್ವರಹಾಳ, ಬಾಲಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.