
ಕೋಲಾರ,ಆ.೧೦- ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.
ನಗರದ ಸರ್.ಎಂ.ವಿ. ಕ್ರೀಡಾಂಗಣ ವನ್ನು ಸುಸಜ್ಜಿತವಾದ ಸಿಂಥೆಟಿಕ್ ಟ್ರ್ಯಾಕ್‌ನ್ನೂ ಮಾಡಲು ಜಿಲ್ಲಾಡಳಿತವು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ದಿಢೀರ್ ಭೇಟಿ ನೀಡಿ ಇಲ್ಲಿನ ಕ್ರೀಡಾಂಗಣದ ಕಾಮಗಾರಿಗಳನ್ನು ವೀಕ್ಷಿಸಿ, ಗುತ್ತಿಗೆದಾರರ ವಿಳಂಭದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿಗಳು ತ್ವರಿತ ರೀತಿಯಲ್ಲಿ ನಡೆಯದೆ ವಿಳಂಭವಾಗುತ್ತಿದೆ. ಇದರ ಸಂಬಂಧ ಜಿಲ್ಲಾ ಆಡಳಿತವನ್ನು ಸಂಪರ್ಕಿಸಿ ಬೇಗ ಮುಗಿಸಿಕೊಡುವಂತೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಂಡರು. ಕ್ರೀಡಾಂಗಣ ಇಲ್ಲದೆ ಯಾವುದೇ ತರಹದ ಕ್ರೀಡಾಕೂಟಗಳನ್ನೂ ಏರ್ಪಡಿಸಲು ಸಾದ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿ, ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಿ ಕ್ರೀಡಾ ಕೂಟಗಳಿಗೆ ಸಹಕರಿಸಿಬೇಕೆಂದು ಮನವಿ ಮಾಡಿದರು,
ಈ ಸಂದರ್ಭದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ. ಆರ್.ರಾಘವೇಂದ್ರ, ಹಿರಿಯ ಕ್ರೀಡಾಪಟು ಹೆಚ್. ಜಗನ್ನಾಥನ್, ರಾಜೇಶಬಾಬು, ಗೌಸ್ ಖಾನ್, ನಾಗೇಶ್, ಪುರುಷೋತ್ತಮ್, ಇಸ್ಮಾಯಿಲ್‌ಖಾನ್, ದೇವರಾಜ್, ಕೆ. ಆರ್.ಸತೀಶ್ ಕುಮಾರ್ ಬೇಟಿ ನೀಡಿ ಪರಿಶೀಲನೆ ಮಾಡಿದರು.