ಎಂ. ರಾಜಾಸಾಬ್‌ಗೆ ಕರ್ನಾಟಕ ಆದರ್ಶ ರತ್ನ ರಾಜ್ಯಪ್ರಶಸ್ತಿ

ದಾವಣಗೆರೆ,ನ.19: ಕರ್ನಾಟಕ ಸಿರಿ ಸಂಘಟನೆ ವತಿಯಿಂದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡರಾಜ್ಯೋತ್ಸವ ಹಾಗೂ ಸಂಗೀತ, ಜಾನಪದ, ನೃತ್ಯ, ಮತ್ತು ಸಾಮಾಜಿಕ ಸೇವೆಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಕಾರ್ಮಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಗಣನಿಯ ಸೇವೆ ಸಲ್ಲಿಸಿದ ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯಾಕಾರ್ಯಧ್ಯಕ್ಷರು ಹಾಗೂ ಬೀಡಿ ಕಾರ್ಮಿಕರ ಕಲ್ಯಾಣ ಸಹಕಾರ ಸಂಘದ ಅಧ್ಯಕ್ಷರಾದ ಎಂ ರಾಜಾಸಾಬ್ ಗೆ ಕರ್ನಾಟಕ ಆದರ್ಶ ರತ್ನ ರಾಜ್ಯಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಈಸಂದರ್ಭದಲ್ಲಿ ಖ್ಯಾತ ಚಲನ ಚಿತ್ರ ಹಾಸ್ಯ ನಟ ಬಿರಾದರ್, ಧರ್ಮದರ್ಶಿ ನೀಲಕಂಠ ಸಾಪಿ. ಆಡಿ, ಕರ್ನಾಟಕ ಸಿರಿ ಸಂಘಟನೆ ರಾಜ್ಯಾಧ್ಯಕ್ಷ ಎಲ್. ಜಯಣ್ಣ, ಸೇರಿದಂತೆ ಅನೇಕ ಕಲಾವಿದರು, ಕನ್ನಡ ಪರ ಸಂಘಟಕರು ಉಪಸ್ಥಿತರಿದ್ದರು