ಎಂ.ಬಿ.ಪಾಟೀಲ ನಾಳೆಯಿಂದ ಒಂದು ವಾರಗಳ ಕಾಲ ವಿಜಯಪುರದಲ್ಲಿ ವಾಸ್ತವ್ಯ

ವಿಜಯಪುರ ಎ.21:.ಮಾಜಿ ಸಚಿವ, ಬಬಲೇಶ್ವರ ಶಾಸಕ, ಮಾನ್ಯ ಎಂ.ಬಿ.ಪಾಟೀಲರವರು ನಾಳೆಯಿಂದ ಒಂದು ವಾರಗಳ ಕಾಲ ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ.2.00 ಗಂಟೆವರೆಗೆ ಬಿ.ಎಲ್.ಡಿ.ಇ.ಸಂಸ್ಥೆತಮ್ಮಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಲು ಲಭ್ಯವಿದ್ದಾರೆ.ಅನಿವಾರ್ಯಇದ್ದವರು ಮಾತ್ರ ಈ ಸಮಯದಲ್ಲಿ ಮಾನ್ಯ ಶಾಸಕರನ್ನು ಭೇಟಿ ಮಾಡಬಹುದು.
ಇದನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಸಾರ್ವಜನಿಕರ ಭೇಟಿಇಲ್ಲ, ತೀವ್ರತುರ್ತು ಸಂದರ್ಭಗಳಲ್ಲಿ ಮಾತ್ರದೂರವಾಣಿ ಮೂಲಕ ಸಂಪರ್ಕಿಸಬಹುದುಎಂದು ಬಬಲೇಶ್ವರ ಶಾಸಕರಕಚೇರಿ ಪ್ರಕಟಣೆತಿಳಿಸಿದೆ.
ಶಾಸಕ ಎಂ.ಬಿ.ಪಾಟೀಲರಿಂದ ಸಾರ್ವಜನಿಕರಲ್ಲಿ ಮನವಿಃ ಹೆಚ್ಚುತ್ತಿರುವಕೊರೋನಾ ರೋಗಿಗಳ ಸಂಖ್ಯೆಯಿಂದ ವೈದ್ಯರು, ಆಸ್ಪತ್ರೆಗಳಿಗೆ ಎಲ್ಲವನ್ನೂ ನಿಭಾಯಿಸಲುಕಷ್ಟಸಾಧ್ಯವಾಗಿದೆ. ಎಲ್ಲರೂತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರುಕೊರೋನಾ ನಿಯಮಗಳನ್ನು ಉಲ್ಲಂಘಿಸಬಾರದು, ಮಾಸ್ಕ್‍ಧರಿಸಬೇಕು, ಸಾಮಾಜಿಕಅಂತರಕಾಪಾಡಿಕೊಂಡು, ಸ್ಯಾನಿಟೈಜರ್ ಬಳಸಿ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು.ಅನಗತ್ಯವಾಗಿ ಸಾರ್ವಜನಿಕವಾಗಿತಿರುಗಾಡಬಾರದು ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರತಮ್ಮ ಮನೆಗಳಿಂದ ಹೊರಗಡೆ ಹೋಗಬೇಕು ಇಲ್ಲದಿದ್ದರೆ ಮುಂದಿನ ಕೆಲವು ದಿನಗಳ ಕಾಲ ಸಂಚರಿಸುತ್ತಿರುವುದೇತಮ್ಮ ಹಾಗೂ ತಮ್ಮಕುಟುಂಬದ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಎಂ.ಬಿ.ಪಾಟೀಲ ಸಾರ್ವಜನಿಕರಲ್ಲಿ ಕಳಕಳಿಯ ವಿನಂತಿ ಮನವಿ ಮಾಡಿದ್ದಾರೆ.