ಎಂ. ಬಿ. ಪಾಟೀಲರು ಮಾಡಿರುವ ಅಭಿವೃದ್ಧಿ ಜನ ಮೆಚ್ಚಿದ್ದಾರೆ

ವಿಜಯಪುರ:ಮೇ.15: ಎಂ. ಬಿ. ಪಾಟೀಲರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ನೀಡಿರುವ ಭರವಸೆಗಳನ್ನು ಮೆಚ್ಚಿ ಬಬಲೇಶ್ವರ ಮತದಾರರು ಎಂ. ಬಿ. ಪಾಟೀಲರನ್ನು ಆಶೀರ್ವದಿಸಿ 6ನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಆಶಾ ಎಂ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ಎಂ. ಬಿ. ಪಾಟೀಲರ ಪರ ಮತ ಚಲಾಯಿಸಿದ 93923 ಮತದಾರರು, ಈ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಹಿರಿಯರು, ಮಹಿಳೆಯರು ಮತ್ತು ಯುವಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಬಬಲೇಶ್ವರ ಮತಕ್ಷೇತ್ರದ ಹಿರಿಯರಿಗೆ ಮಗಳಾಗಿ, ಅಣ್ಣ ತಮ್ಮಂದಿರು ಮತ್ತು ಅಕ್ಕ ತಂಗಿಯರಿಗೆ ಸಹೋದರಿಯಾಗಿ ಜನ ಸೇವೆ ಮಾಡುತ್ತೇನೆ. ಎಂ. ಬಿ. ಪಾಟೀಲರು ಬಬಲೇಶ್ವರ ಮತಕ್ಷೇತ್ರವನ್ನು ನಂದನವನ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ‘ಬಂಗಾರದ ಬಬಲೇಶ್ವರ’ ಮಾಡಲು ಪಣತೊಟ್ಟಿದ್ದಾರೆ. ಮೇಗಾಡೈರಿ ಸ್ಥಾಪನೆ, ಫು???ಪಾರ್ಕಗೆ ಚಾಲನೆ, ಬಂಜಾರ ಉಡುಪಿಗೆ ವಿಶ್ವಮಾನ್ಯತೆ ದೊರಕಿಸಲು ಯೋಜನೆಗಳನ್ನು ರೂಪಿಸಿದ್ದಾರೆ. ಅಲ್ಲದೇ, ರೈತರನ್ನು ಕೃಷಿ ಉದ್ಯಮಿಗಳನ್ನು ಮಾಡಲು ರೂಪರೇಷೆ ಸಿದ್ದಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ನಾನು ಕೂಡ ಕಾಳಜಿ ವಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಈಗಾಗಲೇ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಯೋಜನೆಗಳು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿವೆ. ಇದರಿಂದ ಮಹಿಳಾ ಸಮುದಾಯಕ್ಕೆ ಹಾಗೂ ನಮ್ಮ ಮತಕ್ಷೇತ್ರದ ಜನರ ಸವಾರ್ಂಗಿಣ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.