ಎಂ ಬಿ ಪಾಟೀಲಗೆ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ

ವಿಜಯಪುರ:ಮೇ.17: ಕೆ ಪಿ ಸಿ ಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ ಬಿ ಪಾಟೀಲ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಏನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷರಾದ ಅಮಿತ ಚವ್ಹಾಣ ಅವರು ಅಗ್ರಹಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ ಬಿ ಪಾಟೀಲ ಅವರು ಉತ್ತಮ ಕಾರ್ಯ ಮಾಡಿದ್ದಾರೆ ಪಕ್ಷ ಅಧಿಕಾರಕ್ಕೆ ಬರಲು ಅವರದ್ದು ಪ್ರಮುಖ ಪಾತ್ರವಿದೆ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಜನಪರ ಯೋಜನೆ ಕೆಲಸ ಮಾಡಿದ್ದಾರೆ ಬಬಲೇಶ್ವರ ಭಗೀರಥ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ರಾಜ್ಯದ ಲಿಂಗಾಯತ ಪ್ರಭಾವಿ ನಾಯಕರಾಗಿದ್ದು ಬಸವಾದಿ ಶರಣರ ತತ್ವವನ್ನು ಅಳವಡಿಸಿಕೊಂಡಿರುವ ಪಾಟೀಲರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಸಮಾಸಮಾಜದ ನಿರ್ಮಾಣ ವಾಗುತ್ತಾದೆ ಕಾಂಗ್ರೆಸ್ ಹೈ ಕಮಾಂಡ ಇದನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನ ಕಲ್ಪಿಸುವ ಮುಖಾಂತರ ಸಮಾಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಏನ್ ಎಸ್ ಯು ನ ಅಧ್ಯಕ್ಷರಾದ ಅಮಿತ ಚವ್ಹಾಣ ಒತ್ತಾಹಿಸಿದ್ದಾರೆ.