ಎಂ.ಬಿ. ನಾಗಭೂಷಣಾರಾಧ್ಯ ರವರ ನಿಧನಕ್ಕೆ ಶ್ರದ್ಧಾಂಜಲಿ

ಪಿರಿಯಾಪಟ್ಟಣ, ನ.11: ಪಟ್ಟಣದ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಸಂಸ್ಥಾಪಕರಾದ ಎಂ.ಬಿ. ನಾಗಭೂಷಣಾರಾಧ್ಯ ರವರ ನಿಧನಕ್ಕೆ ಸಂಘದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಿಕ್ಷಕ ನಾಗೇಂದ್ರ ಆರಾಧ್ಯ ಮಾತನಾಡಿ ಸರ್ಕಾರಿ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಸಿದ ಸಂಸ್ಥಾಪಕರಾದ ಎಂ.ಬಿ ನಾಗಭೂಷಣಾರಾಧ್ಯ ರವರು ಮೂಲತಃ
ಕೆ.ಆರ್ ನಗರ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಜನಿಸಿ ತಾಲ್ಲೂಕಿನ ಸೀಗೆಕೊರೆ ಕಾವಲು ಗ್ರಾಮದಲ್ಲಿದ್ದು ನಿವೃತ್ತಿ ನಂತರ ಮೈಸೂರಿನಲ್ಲಿ ವಾಸವಾಗಿದ್ದರು, ಶಾಲಾ ತನಿಖಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ ತಾಲ್ಲೂಕಿನಲ್ಲಿ ಉತ್ತಮ ಹೆಸರು ಗಳಿಸಿದ್ದರು, ಹಿರಿಯರ ಕಾರ್ಯವೈಖರಿಗಳು ಮುಂಬರುವ ಪೀಳಿಗೆಗೆ ಮಾದರಿಯಾಗಲಿ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಜಗದೀಶಾರಾಧ್ಯ ನಿರ್ದೇಶಕರಾದ ಮಹೇಶ್, ಸುರೇಶ್, ಮಂಜುನಾಥ್, ಜಯಲಕ್ಷ್ಮಿ, ದೇವರಾಜು, ರವಿ, ಶ್ಯಾಮ್, ಶಿವಕುಮಾರ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಮೂರ್ತಿ, ಪರಮಶಿವಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಮತ್ತಿತರರಿದ್ದರು.