ಎಂ ಬಿ ಕೆ ಅವರಿಗೆ ಎರಡುದಿನಗಳ ತರಬೇತಿ

ಗುರುಮಠಕಲ್:ಜ.11: ತಾಲೂಕು ಪಂಚಾಯತ್ ಕಾರ್ಯಾಲಯ ಇವರ ಸಹಯೋಗದೊಂದಿಗೆ ಮತ್ತು ಕೃಷಿ ಸಂಜೀವಿನಿ ಮಹಿಳಾ ಸ್ವಸಾಯ ಸಂಘಗಳ ಎಂ ಬಿ ಕೆ ಅವರಿಗೆ ಎರಡು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್ ಎಸ್ ಖಾದ್ರೋಳಿ ಅವರು ಮಾತನಾಡಿ ಎಲ್ಲಾ ಎಂ ಬಿ ಕೆ ಅವರಿಗೆ ತಮ್ಮ ಹಿತನುಡಿಗಳನ್ನು ಹೇಳುವುದರ ಮೂಲಕ ಜೀವನದಲ್ಲಿ ಮಹಿಳಾ ಸಬಲೀಕರಣವಾದರೆ ದೇಶ ಮುಂದುವರೆದಂತೆ ಎಂದು ಹೇಳಿದರು. ಮತ್ತು ಮಹಿಳಾ ಸ್ವಸಾಯ ಸಂಘಗಳಿಗೆ ಸರಕಾರದಿಂದ ಅನೇಕ ಸಾಲ ಸೌಲಭ್ಯಗಳು ಸಿಗುತ್ತವೆ ಆ ಮೂಲಕ ಮತ್ತು ಮರುಪಾವತಿ ವ್ಯವಸ್ಥೆ ಕೂಡ ಮಾಡಬೇಕಾಗುತ್ತದೆ ಇದರ ಸದುಪಯೋಗ ಗ್ರಾಮೀಣ ಮಟ್ಟದಲ್ಲಿ ಸಂಪೂರ್ಣವಾಗಿ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲಾ ಎಂ ಬಿ ಕೆ ಅವರ ಮೇಲೆ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ತಾಲೂಕು ವ್ಯವಸ್ಥಾಪಕರು ಆದಂತಹ ಸುಮಂಗಲ ಇವರು ಎರಡು ದಿನ ತರಬೇತಿಯನ್ನು ನಡೆಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರು ಶೇಖರ್ ಮತ್ತು ಕಾರ್ಯದರ್ಶಿಗಳಾದ ಶಿವಶರಣಪ್ಪ ಹಾಗೂ ಎಲ್ಲಾ ಪಂಚಾಯಿತಿಯ ಎಲ್ ಸಿ ಆರ್ ಪಿ ಗಳು ಹಾಜರಿದ್ದರು.
ಅದೇ ರೀತಿ ಗ್ರಾಮ ಪಂಚಾಯಿತಿಯ ಒಕ್ಕೂಟದ ಸದಸ್ಯರಿಗೂ ಮಾರ್ಗದರ್ಶನ ತರಬೇತಿ ಸಹ ನೀಡಲಾಯಿತು.