ಎಂ.ಪಿ.ರವೀಂದ್ರ ಜನ್ಮದಿನ : ಹಣ್ಣು, ಬ್ರೆಡ್ ವಿತರಣೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ :ಏ,6- ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿದ್ದ ದಿ. ಎಂ.ಪಿ.ರವೀಂದ್ರ ಅವರ 54ನೇ ಜನ್ಮದಿನಾಚರಣೆ ಪ್ರಯುಕ್ತ ಅಭಿಮಾನಿ ಬಳಗದವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಶಿವಕುಮಾರ್, ಪುರಸಭೆ ಮಾಜಿ ಸದ್ಯಸ ಸಂತೋಷ ಜೈನ್, ಪುರಸಭೆ ನಾಮಕರಣ ಸದ್ಯಸ ಕೊಟ್ರೇಶ್ ಬಾವಿಮನಿ, ಟಿಎಪಿಸಿಎಂಎಸ್ ನಿರ್ದೇಶಕ ಸುರೇಶ ಮಲ್ಕಿಒಡೆಯರ್, ಕಣದಾಳ ಶಂಕ್ರಣ್ಣ, ಕರೆಯತ್ತಿನ ಕೊಟ್ರೇಶ, ಬಸವರಾಜ ಬಾವಿಹಳ್ಳಿ,  ಅನಿಲ್, ಗಿರೀಶ ಇಟಿಗಿ, ಸಿದ್ದೇಶ ಹಣ್ಣಿ, ವೀರೇಶ್ ಹಣ್ಣಿ  ಇತರರು ಇದ್ದರು.