ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್‌ ನಿಂದ ನೆರವು

ಹರಪನಹಳ್ಳಿ,.ಜೂ.೨;. ಕಳೆದ 2 ವರ್ಷಗಳ ಅವಧಿಯಲ್ಲಿ ಕೋವಿಡ್ ಸೋಂಕಿನಿಂದ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋವಿಡ್ ಅಲೆಯಲ್ಲಿ ಆಹಾರ ಧಾನ್ಯಗಳ ವಿತರಣೆ, ಆಂಬುಲೆನ್ಸ್ ಸಹಾಯವಾಣಿ, ವೈದ್ಯಕೀಯ ಕಿಟ್, ಆಕ್ಸಿಜನ್ ವಿತರಣೆ ಮಾಡುವ ಮೂಲಕ ನಮ್ಮ ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು  ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್‌  ಅಧ್ಯಕ್ಷರಾದ ಎಂ.ಪಿ.ವೀಣಾ ಮಹಾಂತೇಶ್ ರವರು ಹೇಳಿದರು.ಪಟ್ಟಣದ ಆಚಾರ್ಯ ಬಡಾವಣೆಯಲ್ಲಿರುವ ತಮ್ಮ ಕಛೇರಿಯಲ್ಲಿ ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್, ಫಲದ ಆಗ್ರೋ ರಿಸರ್ಚ್ ಫೌಂಡೆಷನ್ ಪ್ರೆöÊ.ಲಿ, ಫಲದಾಯಿ ಫೌಂಡೆಷನ್ ಮತ್ತು ಜರ್ಮನ್ ಸಂಸ್ಥೆ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಉಚಿತ ಪೂರೈಕೆ ಹಾಗೂ ಪತ್ರಕರ್ತರಿಗೆ ಧವಸ ಧಾನ್ಯ ಹಾಗೂ ಮಾಸ್ಕ್ ವಿತರಣೆ ಮಾಡಿ ಮಾತನಾಡಿ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಕ್ಸಿಜನ್ ಪ್ರಮಾಣದಲ್ಲಿ ವ್ಯತ್ಯಾಸವಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುವುದು. ಶ್ರೀ ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ನಿರಂತರವಾಗಿ ಫಲದ ಆಗ್ರೋ ಸಂಸ್ಥೆ ಜೊತೆಗೆ ರೈತರೊಂದಿಗೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಾ ಬಂದ ಹಿನ್ನಲೆಯಲ್ಲಿ ಫಲದ ಸಂಸ್ಥೆ ಜೊತೆ ಸಂಪರ್ಕ ಹೊಂದಿರುವ ವಿದೇಶಿ ಕಂಪೆನಿಗಳ ಪ್ರತಿನಿಧಿಗಳ ನಮ್ಮ ರೈತರ ಹೊಲಗಳಿಗೆ ಪ್ರತಿ ವರ್ಷ ಭೇಟಿ ನೀಡುತ್ತಾ ಬಂದಿದ್ದರು. ಫಲದ ಆಗ್ರೋ ಸಂಸ್ಥೆ ಜೊತೆ ಸಂಪರ್ಕ ಹೊಂದಿದ ಜರ್ಮನ್ ಸಂಸ್ಥೆಗಳಾದ ಲಾಟಾವು ಮತ್ತು ಡಿ.ಎಂ. ಮಾರ್ಕೆಟಿಂಗ್ ಸಂಸ್ಥೆಗಳು ಆಮ್ಲಜನಕ ಸಾಂದ್ರಕ ಯಂತ್ರ ಫಲದ ಸಂಸ್ಥೆಗೆ ನೀಡಿವೆ ಎಂದರು. ಕೆಪಿಸಿಸಿ ವೈದ್ಯಕೀಯ ಘಟಕದ ಉಪಾದ್ಯಕ್ಷ ಡಾ.ಮಹಂತೇಶ ಚರಂತಿಮಠ್, ಚೀಗಟೇರಿ ಯುವ ಕಾಂಗ್ರೇಸ್ ಅದ್ಯಕ್ಷ ಶಿವರಾಜ್, ನ್ಯಾಯವಾದಿ ಸಿದ್ದಲಿಂಗನಗೌಡ, ದಾದಪೀರ್. ಗಾಯಿತ್ರಮ್ಮ, ತಿಮ್ಮಲಾಪುರದ ನಾಗರಾಜ, ಸಚಿನ್ ಸೇರಿದಂತೆ ಇತರರು ಇದ್ದರು.