ಎಂ.ಪಿ ಟಿಕೇಟ್: ವರಿಷ್ಠರ ನಿರ್ಧಾರಕ್ಕೆ ಬದ್ದ-ಕರಡಿ

ಸಂಜೆವಾಣಿ ವಾರ್ತೆ
ಸಿಂಧನೂರು.ಜ.೧೯- ಮುಂಬರುವ ಲೋಕಸಭಾ ಚುನಾವಣಾಯಲ್ಲಿ ನಾನು ಕೂಡ ಆಕಾಂಕ್ಷಿಯಾಗಿದ್ದು ,ಪಕ್ಷದ ವರಿಷ್ಠರು ಟಿಕೇಟ್ ನೀಡಿದರೆ ಸ್ಪರ್ಧಿಸುವದಾಗಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ಹೊರ ಹೊಲಯದಲ್ಲಿ ನಡೆದಿರುವ ರೈಲ್ವೆ ನಿಲ್ದಾಣ ಕಾಮಗಾರಿ ವಿಕ್ಷಿಸಿ ನಂತರ ಸುದ್ದಿ ಗಾರರೊಂದಿಗೆ ಮಾತನಾಡುತ್ತಾ ಪಕ್ಷದ ಸರ್ವೆ ಪ್ರಕಾರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ೪೦೦ ಸ್ಥಾನಗಳನ್ನು ಪಡೆಯುತ್ತದೆ.ಮೋದಿ ಅಲೆ ಈ ಬಾರಿಯೂ ಕೆಲಸ ಮಾಡಲಿದ್ದು ನಾನು ಸಹ ಎರಡು ಬಾರಿ ಸಂಸದನಾಗಿ ಕೆಲಸ ಮಾಡಿದ್ದು ಈ ಬಾರಿಯೂ ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಟಿಕೇಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೆನೆ ಇಲ್ಲವೆ ಬಿಜೆಪಿ ಪಕ್ಷ ಕೆ.ಕರಿಯಪ್ಪ ಸೇರಿದಂತೆ ಯಾರಿಗೂ ಟಿಕೆಟ್ ಕೊಟ್ಟರು ಅವರ ಪರವಾಗಿ ಕೆಲಸ ಮಾಡುತ್ತೆನೆಂದರು.
ಜ.೩೧ ರಂದು ರೈಲ್ವೆ ಇಲಾಖೆಯ ಪ್ರಾದೇಶಿಕ ಅಧಿಕಾರಿಗಳು ಪರಿಶೀಲನೆ ನಡೆಸಿ ನೀಡುವ ವರದಿ ಆಧಾರದ ಮೇಲೆ ಸಿಂಧನೂರಿಗೆ ರೈಲು ಸಂಚಾರ ಆರಂಭಿಸಲಾಗುವದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಎಂ.ದೊಡ್ಡ ಬಸವರಾಜ, ಅಮರೇಗೌಡ ವಿರುಪಾಪುರ, ನಿರುಪಾದೆಪ್ಪ ಜೋಳದರಾಶಿ, ಹನುಮೇಶ ಸಾಲಗುಂದಾ, ಸಿದ್ರಾಮೇಶ ಮನ್ನಾಪುರ, ಮಲ್ಲಿಕಾರ್ಜುನ ಜೀನೂರು, ರವಿ ರಾಠೋಡ್ ಸೇರಿದಂತೆ ಅನೇಕರು ಇದ್ದರು.