ಎಂ.ನಾಗಪ್ಪ ಪ್ರತಿಷ್ಠಾನದ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆರ್.ಇಂದಿರಾ, ಡಾ.ಅರುಣ ಮಸ್ಕಿ ಆಯ್ಕೆ

ರಾಯಚೂರು.ಮಾ.೨೬- ನಗರದ ಡಾ.ಎಂ.ನಾಗಪ್ಪ ವಕೀಲರು ಪ್ರತಿಷ್ಠಾನದ ವತಿಯಿಂದ ನೀಡುತ್ತಿರುವ ವರ್ಷದ ವ್ಯಕ್ತಿ ಪ್ರಶಸ್ತಿಗೆ ದೇವದುರ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಇಂದಿರಾ, ನಗರದ ರಿಮ್ಸ್‌ನ ಸಹ ಪ್ರಾಧ್ಯಾಪಕರು ಹಾಗೂ ಕೋವಿಡ್-೧೯ ನ ನೋಡಲ್ ಅಧಿಕಾರಿಯಾದ ಡಾ.ಅರುಣ ಮಸ್ಕಿ ಅವರನ್ನು ಆಯ್ಕೆ ಮಾಲಾಗಿದೆ.
೨೦೨೦ ನೇ ಸಾಲಿನ ಪ್ರಶಸ್ತಿಗೆ ಶಿಕ್ಷಾಣಾಧಿಕಾರಿ ಆರ್.ಇಂದಿರಾ, ೨೦೨೧ ನೇ ಸಾಲಿನ ಪ್ರಶಸ್ತಿಗೆ ಹೃದಯ ರೋಗ ತಜ್ಞ ಡಾ.ಅರುಣ ಮಸ್ಕಿ ಅವರು ಭಾಜನರಾಗಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ೨೦೨ ರಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿತ್ತು. ಹೀಗಾಗಿ ಈ ವರ್ಷ ಎರಡು ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಇದೇ ದಿ.೨೯ ರಂದು ಸಂಜೆ ೬-೩೦ ಕ್ಕೆ ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಸಪ್ಪ ತಿಪ್ಪಾರೆಡ್ಡಿ ತಿಳಿಸಿದ್ದಾರೆ.
೨೯ ರಂದು ನಡೆಯುವ ಪ್ರತಿಷ್ಠಾನದ ೧೭ ನೇ ವಾರ್ಷಿಕೋತ್ಸವ ಹಾಗೂ ಲಿ.ಡಾ.ಎಂ ನಾಗಪ್ಪ ವಕೀಲರ ೧೦ ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ನಗರದ ಹಿರಿಯ ಹೃದಯ ರೋಗ ತಜ್ಞ ಡಾ.ಬಿ.ಮಹಾಲಿಂಗಪ್ಪ, ಹಂಪಿ ಕನ್ನಡ ವಿವಿಯ ಶಾಸನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.