ಎಂ-ಟೆಕ್ ರ್ಯಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ

ಕಲಬುರಗಿ,ಏ.3- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ (ವಿಟಿಯು) 2020-21ನೇ ಸಾಲಿನಲ್ಲಿ ನಡೆಸಿದ ವಾರ್ಷಿಕ
ಪರೀಕ್ಷೆಯಲ್ಲಿ ವಿ.ತಾ.ವಿ. ಸ್ನಾತಕೋತ್ತರ ಕೇಂದ್ರ ಕಲಬುರಗಿಯ ಎಮ್‍ಟೆಕ್ ಸಿವಿಲ್ ಇಂಜಿನಿಯರಿಂಗ ಅಧ್ಯಯನ
ವಿಭಾಗದ ಮೂವರು ವಿದ್ಯಾರ್ಥಿಗಳು ರ್ಯಾಂಕ ಪಡೆಯುವ ಮೂಲಕ ಸಂಸ್ಥೆಗೆ ಮತ್ತು ಕಲಬುರಗಿಗೆ ಕಿರ್ತಿ ತಂದಿದ್ದಾರೆ.
ರ್ಯಾಂಕ ವಿಜೆತರಾದ ಸಂತೋಷಕುಮಾರ ಬಿ. 1ನೇ ರ್ಯಾಂಕ್ ಹಾಗೂ ಶರಣಕುಮಾರ ಜಿ. 2ನೇ ರ್ಯಾಂಕ್ (ಹೈವೆ ತಂತ್ರಜ್ಞಾನ) ಮತು ್ತ ಮೆಘನಾ ಕೆ ಎಂ 5ನೇ ರ್ಯಾಂಕ್ (ನಿರ್ಮಾಣ ತಂತ್ರಜ್ಞಾನ) ಗಳಿಸಿದ್ದಾರೆ.
ರ್ಯಾಂಕ್ ವಿಜೇತರನ್ನು ಯೋಜನಾ ಸಂಯೋಜಕರಾದ ಪ್ರೋ. ಬ್ರಿಜ್‍ಬೂಷಣ ಎಸ್ ಹಳಿಮನಿ, ಡಾ. ಶ್ರೀನಿವಾಸ ರೇಡ್ಡಿ ಶಹಾಪೂರ, ಡಾ, ಎನ್. ವೇಂಕಟರಮನ್, ಪೋ. ಮನೀತ್ ಪಿ.ಡಿ ಹಾಗೂ ಸುರೇಶ ನಾಯಕ ಅವರು ವಿದ್ಯಾಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದ್ದಾರೆ.