ಎಂ ಟೆಕ್ ನಲ್ಲಿ ಚೈತ್ರಗೆ ಪ್ರಥಮ ಱ್ಯಾಂಕ್


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.07: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಎಂ.ಟೆಕ್.ಇನ್ ಪ್ರೊಡಕ್ಷನ್ ಮ್ಯಾನೆಜ್ ಮೆಂಟ್ ವಿಭಾಗದಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿನಿ ಕುಮಾರಿ. ಚೈತ್ರ .ಕೆ (3ವಿಸಿ21 ಎಮ್ ಪಿ ಎಮ್ 03) 1ನೇ ಱ್ಯಾಂಕ್‍ನ್ನು ಸಿಜೀಪಿಏ 9.53 ಯೋಂದಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದಲ್ಲಿ 2023-24 ನೇ ಸಾಲಿಗೆ ಪಡೆದಿದ್ದಾರೆ ಎಂದು
ಪ್ರಾಂಶುಪಾಲರು ಡಾ|| ಟಿ.ಹನುಮಂತ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.