ಎಂ ಜೆ ಪ್ರಜ್ವಲ್‍ಗೆ ಲೋಕಲ್ ಟಾಲೆಂಟ್ ಪ್ರಶಸ್ತಿ

ಜೇವರ್ಗಿ :ಮಾ.4 : ಕಲ್ಯಾಣ ಕರ್ನಾಟಕ ಕಲಬುರ್ಗಿ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮನೋಮೆ ಸ್ಟುಡಿಯೋ ವತಿಯಿಂದ ನಡೆಸಲಾದ ಕಲಬುರ್ಗಿ ಇಂಟನ್ರ್ಯಾಷನಲ್ ಫಿಲಂ ಫೇರ್ ಅವಾರ್ಡ್ 2023 ರ ತಾಲೂಕಿನ ಪ್ರಜ್ವಲ್ ಅವರಿಗೆ ಈ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೇವರ್ಗಿ ತಾಲೂಕಿನ ಯುವಕರ ನೆಚ್ಚಿನ ಡ್ಯಾನ್ಸ್ ಮಾಸ್ಟರ್ ಆಗಿರುವ ಇವರನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕಾಗಿ ಎಂ ಜೆ ಡ್ಯಾನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

ಲೋಕಲ್ ಟ್ಯಾಲೆಂಟ್ ಪ್ರಶಸ್ತಿಗೆ ಬಾಜನರಾದ ಎಂ ಜಿ ಪ್ರಜ್ವಲ್ ರವರು ಈ ಪ್ರಶಸ್ತಿ ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದೆ. ಪ್ರಶಸ್ತಿ ನೀಡಿದ ಸಂಸ್ಥೆಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಗೌರವ ಪೂರ್ವಕವಾಗಿ ಮಾತನಾಡಿ ವೈಭವ್ ಕೇಶಕರ್, ನಾಗರಾಜ ದೇಶಪಾಂಡೆ, ನಟ ಅಭಿಷೇಕ್, ರೇಖಾ ದಾಸ್ ಇವರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದರು.