ಎಂ.ಜಿ.ಸರ್ಕಲ್ ಬಳಿ ಜನ ಜಂಗುಳಿ

ಬಳ್ಳಾರಿ, ಜೂ.03: ನಗರದ ಪ್ರಮುಖ ಸರ್ಕಲ್ ಗಳಲ್ಲಿ ಪೊಲೀಸರು ಇರುತ್ತಾರೆ ಆದರೆ ಪಟೇಲ್ ನಗರ, ವಿಶಾಲನಗರ ಬಳಿಯ ಎಂ.ಜಿ. ಸರ್ಕಲ್ ಬಳಿ ಪೊಲೀಸರು ಇಲ್ಲದ ಕಾರಣ ಇಲ್ಲಿ ಸಂಜೆವೇಳೆಯೂ ಜನ ಜಂಗುಳಿ ಇರುತ್ತದೆ.
ಈ ಸರ್ಕಲ್ ನಲ್ಲಿ ರಸ್ತೆ ಬದಿಗಳಲ್ಲಿ ವಿವಿಧ ವಸ್ತುಗಳ ಮಾರಾಟ ನಡೆಯುತ್ತಿದೆ. ಅದಕ್ಕಾಗಿ ಜನರು ಸಂಜೆಯಾದರೂ ಇಲ್ಲಿ ಓಡಾಟ ನಿರಂತರವಾಗಿರುತ್ತದೆ. ಇದು ನಿನ್ನೆ ಸಂಜೆಯ ದೃಶ್ಯ. ಇಲ್ಲಿ ಪೊಲೀಸರು ಇರದಿರುವುದೇ ಇದಕ್ಕೆ ಕಾರಣ ಇರಬಹುದು.