ಎಂ.ಕೆ.ರಮೇಶ ಅವರಿಗೆ ಸನ್ಮಾನ

ಬೆಂಗಳೂರು,ಮಾ.೧೭-
ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಗೌರವಾನ್ವಿತ ಕುಲಪತಿಗಳಾದ ಎಂ.ಕೆ.ರಮೇಶ ಇವರಿಗೆ ರಾಯಚೂರಿನ ಸಮಾಜ ಸೇವಕರಾದ ತಲಕಾಯಿ ಮಾರೆಪ್ಪ ಅವರು ಇಂದು ಬೆಂಗಳೂರಿನಲ್ಲಿ ಭೇಟಿಯಾಗಿ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ರಮೇಶ ಅವರು ದಕ್ಷ ಮತ್ತು ವಿದ್ವಾಂಸರಾದ ಕಾರಣ ಅವರಿಗೆ ನಮ್ಮ ಸಮಾಜದ ಪರವಾಗಿ ಸನ್ಮಾನಿಸುತ್ತಿದ್ದೇನೆ.ಅವರ ಬಗ್ಗೆ ಗೌರವ, ಅಭಿಮಾನವಿದೆ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿಯಾದ ತಲಕಾಯಿ ಮಾರೆಪ್ಪ ತಿಳಿಸಿದ್ದಾರೆ.
ರಮೇಶ ಅವರ ನೇತೃತ್ವದಲ್ಲಿ ಈ ವಿವಿ ಯಿಂದ ಜ್ಞಾನ ನಿಧಿಗಳಾಗಿ ವಿದ್ಯಾರ್ಥಿಗಳು ಹೊರ ಹೊಮ್ನಲಿ, ಹಲವಾರು ಅಭಿವೃದ್ಧಿ ಕಾರ್ಯಗಳ ಜೊತೆಗೆ ಜ್ಞಾನಾರ್ಜನೆಗೆ ಉಪಯೋಗವಾಗುವ ಕೆಲಸಗಳಾಗಲಿ ಎಂದು ಕೋರಿದ್ದರು.