ಎಂ.ಕಲಬುರ್ಗಿಯವರ ೮ನೇ ವರ್ಷದ ಸ್ಮರಣಾರ್ಥ ಸಂಸ್ಕೃತಿಕ ಕಾರ್ಯಕ್ರಮ

ಕವಿತಾಳ,ಸೆ.೦೨-
ಕವಿತಾಳ ಸಮೀಪ ಅಮರ ಜ್ಞಾನಪೀಠ ಚಿಕ್ಕೆಸರೂರು ಹಾಗೂ ಪಾಮನಕಲ್ಲೂರು ವಾಲ್ಮೀಕಿ ಭವನದಲ್ಲಿ ಆರ್‌ಸಿಎಫ್ ಸಂಘಟನೆ ಆಯೋಜಿಸಿದ ಡಾಕ್ಟರ್ ಎಂ.ಕಲಬುರ್ಗಿಯವರ ೮ನೇ ವರ್ಷದ ಸ್ಮರಣಾರ್ಥ ಸಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಪ್ರತಿಪಾದಕ ರಾಷ್ಟ್ರೀಯ ಮುಖಂಡರಾದ ಪಶ್ಚಿಮ್ ಬಂಗಾಳದ ಅಸಮಗಿರಿಯವರು ಮಾತನಾಡಿ ಸತ್ಯನ್ವೇಷಿಕ ಸಂಶೋಧಕ ಡಾಕ್ಟರ್ ಎಮ್ ಕಲ್ಬುರ್ಗಿ ಅವರನ್ನು ಬಹುತೇಕವಾಗಿ ಹತ್ಯೆ ಮಾಡಿರಬಹುದು ಆದರೆ ಕಲ್ಬುರ್ಗಿಯವರ ಸತ್ಯ ಸಂಶೋಧನೆಗೆ ಯಾವತ್ತೂ ಸಾವಿಲ್ಲ ಎಂದು ಅಸಮಗಿರಿಯವರು ಪ್ರತಿಪಾದಿಸಿದರು.
ನಂತರ ಅವರು ಮಾತನಾಡುತ್ತಾ ಸತ್ಯದ ಪ್ರತಿಪಾದಕರೆಲ್ಲರನ್ನೂ ಒಂದೇ ತೆರನಾಗಿ ಹತ್ಯೆ ಮಾಡಲಾಗಿದೆ ದಾಬೂಲ್ಕರ್ ಪಾನ್ ಸರೆ ಕಲ್ಬುರ್ಗಿ ಗೌರಿ ಲಂಕೇಶ್ವರ ಅಂಥವರ ಸಾವುಗಳನ್ನು ಗಮನಿಸಿದರೆ ಅವರ ವೈಚಾರಿಕ ಸಂಘರ್ಷಗಳಿಗೆ ಹೆದರದ ತೀವ್ರ ಬಲಯ ಪಂತಿಯವಾದಿಗಳು ಅವರನ್ನು ಬಹುತೇಕವಾಗಿ ಹತ್ಯೆ ಮಾಡಿರಬಹುದು ಆದರೆ ಸತ್ಯಕ್ಕೆ ಸಾವಿಲ್ಲ ಎಂಬುದನ್ನು ಮರೆತಿದ್ದಾರೆ ಜನತೆಗಾಗಿ ಮಡಿದ ಹುತಾತ್ಮರ ಆಶಯಗಳ ಹಾದಿಯಲ್ಲಿ ಮುನ್ನಡೆದು ಕೋಮುವಾದಿಗಳ ಜನದ್ರೋಹಿ ಉನ್ನಾರಗಳನ್ನು ಬೈಲುಗೊಳಿಸುವ ಕಾರ್ಯಭಾರಿಗಳಿಗೆ ಹೆಗಲುಡೋಣ ಎಂದು ಕರೆ ನೀಡಿದರು.
ನಂತರ ಕ್ರಾಂತಿಕಾರಿ ಸಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕರಾದ ಎಂ ಗಂಗಾಧರ ಮಾತನಾಡಿ ಲಿಂಗಾಯತ ಧರ್ಮದ ಸತ್ಯನ್ವೇಷಣೆ ಕೈಗೊಂಡ ಎಂ ಕಲಬುರ್ಗಿ ಅವರನ್ನು ಲಿಂಗಾಯಿತ ಸ್ಥಾಪಕ ಬಸವಣ್ಣನವರನ್ನು ಇನ್ನಿಲ್ಲವಾಗಿಸಿದ್ದಾರೆ ಅವರು ನಡೆದ ಆದಿಯನ್ನು ಸವಿಸಲು ಅಳಿಸಿ ಹಾಕಲು ಜಗತ್ತಿನ ಯಾವುದೋ ಶಕ್ತಿಗೂ ಸಾಧ್ಯವಿಲ್ಲವಾಗಿದೆ ಅದು ನಿತ್ಯ ನೂತನವಾಗಿ ಅಜರಾಮರ ವಾಗಲಿ ಎಂದು ಈ ವೇದಿಕೆ ಮೇಲೆ ಇರುವಂತ ಆರ್ ಸಿ ಎಫಿನ ರಂಜಿತ ಮಜಮ್ದಾರ್ ಹನುಮಂತಪ್ಪ ಮನ್ನಾಪುರ್ ವಿಜಯರಾಣಿ ಸಿರುವಾರ್ ಶಿವರಾಜ್ ರುದ್ರಾಕ್ಷಿ ರುಕ್ಮಣಿ ಗೆಜ್ಜಲಗಟ್ಟ ಮುಂತಾದವರು ಸಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ನಂತರ ಕಾರ್ಯಕ್ರಮದ ವೇದಿಕೆ ಅಧ್ಯಕ್ಷ ಆದಿ ನಗನೂರ್ ಅವರು ಅಧ್ಯಕ್ಷತೆ ಭಾಷಣ ಮಾಡಿದರು ಕೊನೆಯದಾಗಿ ಕ್ರಾಂತಿಕಾರಿ ಸಂಸ್ಕೃತಿಕ ವೇದಿಕೆಯ ಕಲಾವಿದರು ಕಲ್ಬುರ್ಗಿಯ ಕುರಿತು ಕ್ರಾಂತಿಕಾರಿ ಹಾಡುಗಳನ್ನ ಹಾಡಿದರು.
ಈ ಕಾರ್ಯಕ್ರಮದಲ್ಲಿ ಮಲ್ಲಯ್ಯ ಕಟ್ಟಿಮನಿ ತಿಪ್ಪಣ್ಣ ಚಿಕ್ಕೆ ಸುರೂರ್ ಭೀಮ್ರಾಯ ಭಂಡಾರಿ ಸಂತೋಷ್ ಮಾರುತಿಕರಿಯಪ್ಪ ತೋರಣದಿನ್ನಿ ರಂಗನಾಥ್ ಜಾಲಹಳ್ಳಿ ಸೋಮಶೇಖರ ಹಿರೇಸರೂರು ಲಕ್ಷ್ಮಿ ಬಳಗಾನೂರ ರಾಜಪ್ಪ ದೊಡ್ಡಮನಿ ಎಚ್ ಆರ್ ಹೊಸಮನಿ ಕೆ ನಾಗಲಿಂಗ ಸ್ವಾಮಿ ಶಿವರಾಂ ಕಟ್ಟಿಮನಿ ಮುದಿಯಪ್ಪ ಸುರೇಶ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ನೂರಾರು ಪ್ರತಿನಿಧಿಗಳು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.