ಎಂ.ಎ. ಕನ್ನಡ, ಕನ್ನಡ ಮತ್ತು ಜಾನಪದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ

ಕಲಬುರಗಿ:ಜೂ.20:ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಎಂ.ಎ. ಕನ್ನಡ, ಕನ್ನಡ ಮತ್ತು ಜಾನಪದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಲಾನಿಕಾಯದ ಡೀನರಾದ ಪೆÇ್ರ. ರಮೇಶ ರಾಠೋಡ ಅವರು ಮಾತನಾಡುತ್ತ ಕನ್ನಡ ಭಾಷೆ ಸಂಸ್ಕøತಿ-ಸಂಸ್ಕಾರ ಕಲಿಸುವುದಲ್ಲದೆ ಬದುಕಿನ ರೀತಿ ನೀತಿಗಳನ್ನು ಕಲಿಸುತ್ತದೆ. ಅಂಥ ಬದುಕಿನ ರೀತಿ-ನೀತಿಗಳನ್ನು ಅಧ್ಯಯನ ಮಾಡುವುದೇ ಕನ್ನಡ ಅಧ್ಯಯನ ಸಂಸ್ಥೆ ಎಂದು ಹೇಳಿದರೆ ತಪ್ಪಾಗಲಾರದು ಎಂದು ಹೇಳಿದರು. ಮುಂದುವರೆದು ಮಾತನಡುತ್ತ ಕನ್ನಡ ಭಾಷೆಯ ಬಗ್ಗೆ ನಮಗೆ ಅಭಿಮಾನ ಇರಲೇಬೇಕು. ಜೊತೆಗೆ ಇಂಗ್ಲಿಷ ಮತ್ತು ಇತರೆ ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಇಂಗ್ಲಿಷ ಸಾಹಿತ್ಯದ ತಿಳುವಳಿಕೆ ಅವಶ್ಯಕತೆ ಇದೆ. ನಿಮ್ಮ ಬದುಕು ರೂಪಿಸಿಕೊಳ್ಳುವುದಕ್ಕೆ ಬಹುಭಾಷಿರಾಗಬೇಕು ಎಂದು ಕಿವಿ ಮಾತು ಹೇಳಿದರು. ನಿಮ್ಮ ಈ ಎರಡು ವರ್ಷದ ಕಾಲಾವಧಿಯಲ್ಲಿ ನಿಮ್ಮ ಏಳ್ಗೆ ಸಾಧನೆಗೆ ಸದುಪಯೋಗ ಪಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಉರ್ದು ಮತ್ತು ಪರ್ಶಿಯನ್ ವಿಭಾಗದ ಮುಖ್ಯಸ್ಥರಾದ ಪೆÇ್ರ. ಅಬ್ದುಲ್ ರಬ್ ಉಸ್ತಾದ್ ಅವರು ಮಾತನಾಡುತ್ತ ನಿಮ್ಮ ಈ ಎರಡು ವರ್ಷದ ಅವಧಿಯಲ್ಲಿ ಹೆಚ್ಚಿನ ಜ್ಞಾನವನ್ನು ಸಂಪಾಧಿಸಿ ಬದುಕನ್ನು ರೂಪಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದು ಮಾತನಾಡಿದ ಡಾ. ಶ್ರೀಶೈಲ ನಾಗರಾಳ ಅವರು ಕನ್ನಡ ಅನ್ನದ ಭಾಷೆ ಆದರೆ ಲೌಕಿಕ ಜ್ಞಾನಕ್ಕಾಗಿ ಇತರೆ ಭಾಷೆಗಳನ್ನು ಕಲಿಯಬೇಕೆಂದರು. ಕನ್ನಡ ಸಾಹಿತ್ಯ ವಿಸ್ತರಿಸಲು ಇಂಗ್ಲಿಷ, ಹಿಂದಿ ಮತ್ತು ಉರ್ದು ಭಾಷೆಯನ್ನು ಅರಿತುಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡಿದ ಪೆÇ್ರ. ಎಚ್.ಟಿ. ಪೆÇೀತೆ ಅವರು, ಜ್ಞಾನ ಯಾವುದೇ ನೆಲೆಯಿಂದ ಬಂದರು ಕೂಡ ಅದನ್ನು ಸ್ವೀಕರಿಸುವ ಗುಣ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ನಮ್ಮ ಉಳಿವು ಇರಬೇಕೆಂದರೆ ನಮ್ಮ ಸಾಧನೆ ಮಾರ್ಗ, ಹೆಜ್ಜೆಗಳು ಉಳಿಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳಬೇಕೆಂದರು. ಇದಕ್ಕೆ ಶ್ರಮ, ಪ್ರತಿಭೆ ಇದ್ದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ 41ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅತಿಹೆಚ್ಚು ಚಿನ್ನದ ಪದಕಗಳನ್ನು ಪಡೆದ ರುಕ್ಮಿಣಿ ಹಣಮಂತರಾಯ, ಭಾಗ್ಯಶ್ರೀ ತೇಲ್ಕರ ಮತ್ತು ಜೆಆರ್‍ಎಫ್-ಎನ್‍ಇಟಿ ಪಾಸಾದ ಸಾಹೇಬಗೌಡ ಮತ್ತು ಜೀವನಕುಮಾರ ಇವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿ ಚಂದ್ರಕಾಂತ ತೆಗ್ಗೆಳಿ ಮತ್ತು ಮಹಿಳಾ ಪ್ರತಿನಿಧಿ ರೇಣುಕಾ ಉಪಸ್ಥಿರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಎಂ.ಎ. ಅಂತಿಮ ವರ್ಷ ವಿದ್ಯಾರ್ಥಿಗಳಾದ ದೇವರಾಜ ಸ್ವಾಗತಿಸಿದರು, ಮಹೇಶ ಮಡಿವಾಳ ಮತ್ತು ಶಕುಂತಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.