ಎಂ.ಎಸ್.ಪಿ.ಎಲ್ ‘ವಿಶ್ವ ಪರಿಸರ’ ದಿನಾಚರಣೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.06 : ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಹಾಗೂ  ಭಾರತೀಯ ರೆಡ್ ಕ್ರಾಸ್ ನ ವಿಜಯನಗರ ಘಟಕದ ಜಿಲ್ಲಾಧ್ಯಕ್ಷರಾದ ಎಂ.ಎಸ್.ದಿವಾಕರ ಅವರು ಗಿಡ ನೆಟ್ಟು ನೀರೇರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ದೇಶದಲ್ಲಿ ಶೇ.33 ರಷ್ಟು ಅರಣ್ಯ ಪ್ರದೇಶವಿರಬೇಕು, ಆದರೆ‌ ಪ್ರಸ್ತುತ ಶೇ.೨೧ ರಷ್ಟು ಇದೆ, ಇದರಿಂದಾಗಿ ತಾಪಮಾನ ಹೆಚ್ಚುತ್ತಿದೆ, ದೆಹಲಿಯ ತಾಪಮಾನ 50 ಡಿಗ್ರಿ ದಾಟಿದೆ,   ಈ ಬಾರಿ ನಗರದಲ್ಲಿಯೂ ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆಯಾಗಿತ್ತು, ಅದನ್ನು ತಡೆಯಲು ಹೆಚ್ಚು ಹೆಚ್ಚು ಗಿಡ ನೆಟ್ಟು ಪರಿಸರ ಸಮತೋಲನಗಳಿಸಬೇಕು,   ಪರಿಸರ ರಕ್ಷಣೆ ಅಥವಾ ಜಾಗೃತಿ ಎಂಬುದು ಒಂದು ದಿನದ ಸಿಮೀತ ಕಾರ್ಯಕ್ರಮವಾಗದೆ  ಜೀವನ ಪದ್ದತಿಯಾಗಬೇಕು, ಹೆಚ್ಚು ಹೆಚ್ಚು ಗಿಡ ಮರಗಳು ಬೆಳೆಸೋಣ ಪರಿಸರ ಉಳಿಸೋಣ  ಎಂದು ಆಶಿಸಿದರು.
ರೆಡ್ ಕ್ರಾಸ್ ನ ಉಪಸಭಾಪತಿಗಳಾದ ರವಿಶಂಕರ್ ಅವರು ಮಾತನಾಡಿ, ಹುಟ್ಟು ಹಬ್ಬದ ಸಂದರ್ಭದಲ್ಲಿ ಚಾಕಲೇಟ್, ಕೇಕ್ ಗೆ ಹಣ ಸುರಿಯುವ ಬದಲು ೨೫ ರೂ.ಕೊಟ್ಟು  ಗಿಡ ಕೊಂಡು ನೆಡುವುದರಿಂದ ಸಾರ್ಥಕ ಭಾವ ಬರುವುದು, ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅನುಸರಿಸಿ ಎಂದು ಕರೆ ನೀಡಿದರು.  
ಎಂ.ಎಸ್.ಪಿ.ಎಲ್ ಅವರ ಸಹಕಾರದೊಂದಿಗೆ ಕ್ರೀಡಾಂಗಣ ಸುತ್ತಲೂ  ನೆಟ್ಟ ಗಿಡಗಳಿಗೆ  ಪ್ರೊಟೆಕ್ಟರ್ ಅನ್ನು ಅಳವಡಿಸಲಾಯಿತು. ಈ ಸಂದರ್ಭದಲ್ಲಿ ವಿಜಯನಗರ ರೆಡ್ ಕ್ರಾಸ್ ನ ಸಭಾಪತಿಗಳಾದ ಹೆಚ್.ಶ್ರೀ ನಿವಾಸರಾವ್,  ಜಿಲ್ಲಾ ಕಾರ್ಯದರ್ಶಿ ಅನ್ನಪೂರ್ಣ ಸದಾಶಿವ, ಜಿಲ್ಲಾ ಪ್ರತಿನಿಧಿ  ರೇಖಾ ಪ್ರಕಾಶ್, ಪಿ.ಕೊಟ್ರಪ್ಪ, ಪ್ರಭಾಕರ್, ಎಂ.ಎಂ‌. ತಿಪ್ಪೇಸ್ವಾಮಿ,  ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ, ಸ್ಕೌಟ್ಸ್ ಅ್ಯಂಡ್ ಗೈಡ್ ನ ಜಿಲ್ಲಾಧ್ಯಕ್ಷರಾದ ಮಂಜುನಾಥ, ತಿಪ್ಪೇಸ್ವಾಮಿ, ಎಂ.ಎಸ್.ಪಿ.ಎಲ್ ನ ರಮೇಶ್, ಸ್ಕೌಟ್ಸ್ ಅ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ  ಇತರರು ಇದ್ದರು.