ಎಂ.ಎಸ್.ಐ.ಎಲ್. ಮದ್ಯದ ಮಳಿಗೆ ತೆರವಿಗೆ ಪ್ರತಿಭಟನೆ

ಕೋಲಾರ,ಜ,೧೮- ತಾಲ್ಲೂಕಿನ ಬೆಗ್ಲಿ ಬೆಣೆಜೇನಹಳ್ಳಿ ಗ್ರಾಮದಲ್ಲಿ ನೊತನವಾಗಿ ಪ್ರಾರಂಭಿಸಲಾದ ಎಂ.ಎಸ್.ಐ.ಎಲ್. ಮದ್ಯದ ಮಳಿಗೆಯನ್ನು ತೆರವುಗೊಳಿಸ ಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿವಿಧ ದಲಿತ ಸಂಘಟನೆಗಳು ತಮಟೆ ಚಳುವಳಿ ನಡೆಸುವ ಮೂಲಕ ರಸ್ತೆಯಲ್ಲಿ ಪ್ರತಿಭಟಿಸಿ ಅಕ್ರೋಶ ವ್ಯಕ್ತ ಪಡೆಸಿದರು,
ಪಂಚಾಯಿತಿಗೊಂದು ಎಂ.ಎಸ್.ಐ.ಎಲ್. ಮದ್ಯದ ಮಳಿಗೆಗೆ ಸರ್ಕಾರವು ಅನುಮತಿಸಿರುವ ಹಿನ್ನಲೆಯಲ್ಲಿ ಬೆಗ್ಲಿಗ್ರಾಮದಲ್ಲಿ ಎಂ.ಎಸ್.ಐ.ಎಲ್. ಮದ್ಯದ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಬಡವರ್ಗದ ಕುಟುಂಬಗಳು ಬೀದಿಪಾಲಾಗಲಿದೆ.ನಿರುದ್ಯೋಗಿ ಯುವಕರು ದಾರಿ ತಪ್ಪಿ ಮದ್ಯದ ದಾಸರಾಗಲಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಶಾಂತಿ,ನೆಮ್ಮದಿಗಳು ಹಾಳಾಗಲಿದೆ, ಬಡಕುಟುಂಬಗಳು ಹೊಟ್ಟೆಯ ಮೇಲೆ ತಣ್ಣೀರು ಸುರಿಯಲಿದೆ ಎಂದು ಮಹಿಳೆಯರು ಕಿಡಿ ಕಾರಿದರು,
ಯಾರೂ ಬೆರಳಿಕೆ ಮಂದಿ ಸರ್ಕಾರಕ್ಕೆ ತೆರಿಗೆಯನ್ನು ಹೆಚ್ಚಾಗಿ ಪಾವತಿಸುವವರು ನಮಗೆ ಮದ್ಯದ ಅಂಗಡಿಯನ್ನು ತೆರವು ಮಾಡಬಾರದು ಎನ್ನುತ್ತಿದ್ದಾರೆ ಇವರ ವಾದಕ್ಕೆ ಯಾವೂದೆ ರೀತಿ ಮನ್ನಣೆ ನೀಡದೆ ಎಂ.ಎಸ್.ಐ.ಎಲ್. ಮದ್ಯದ ಅಂಗಡಿಯನ್ನು ಕೊಡಲೇ ತೆರವುಗೊಳಿಸ ಬೇಕು ಇಲ್ಲವಾದರೆ ವಿಷವನ್ನು ಸೇವಿಸುವುದಾಗಿ ಕ್ರಿಮಿನಾಶದ ವಿಷದ ಬಾಟಲು ಹಿಡಿದು ಪ್ರತಿಭಟಿಸಿದ ಮಹಿಳಾ ಸಂಘಟನೆಕಾರರು ಮದ್ಯದ ಅಂಗಡಿಯನ್ನು ತೆರವು ಮಾಡಲು ಒತ್ತಾಯಿಸಿದರು.
ಸುದ್ದಿ ತಿಳಿಸಿದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಅಗಮಿಸಿ ಯಾವೂದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದರು, ಅಬಕಾರಿ ಅಧೀಕ್ಷಕರ ಶ್ರೀಶೈಲ ಅವಜಿ ಹಾಗೂ ತಹಸೀಲ್ದಾರ್ ಹರ್ಷವರ್ಧನ್ ಅವರು ಬೇಟಿ ನೀಡಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿದರು,
ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರ ಅಕ್ಷೇಪಣೆಗಳನ್ನು ದಾಖಲು ಮಾಡಿ ಕೊಂಡು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿ ಪ್ರತಿಬಟನೆಯನ್ನು ಕೈ ಬಿಡ ಬೇಕೆಂದು ಸಮಯ ಅವಕಾಶವನ್ನು ಪಡೆದರು.
ಈ ಸಂದರ್ಭದಲ್ಲಿ ವಿವಿಧ ದಲಿತ ಸಂಘಟನೆಗಳು, ಮಹಿಳಾ ಸಂಘಗಳು ಹಾಗೂ ಗ್ರಾಮದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,