ಎಂ. ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ

ಕಲಬುರಗಿ: ನ.29:ಹೈ.ಕ.ಶಿ. ಸಂಸ್ಥೆಯ ಎಂ. ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ರಾ. ಸೇ. ಯೋಜನೆ ಘಟಕ ಅ ಮತ್ತು ಬ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ಕಲಬುರಗಿ ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರವನ್ನು ಡಾ. ಅಮ್ರತಾ ಅವರು ಉದ್ಘಾಟಿಸಿ ಮಾತನಾಡಿ ಕಣ್ಣಿನ ಮಹತ್ವವನ್ನು ಕುರಿತು ತಿಳಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ ಅವರು ಕಣ್ಣಿನ ಆರೋಗ್ಯ ಮತ್ತು ಮಹತ್ವದ ಕುರಿತು ವಿದ್ಯಾರ್ಥಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಜಶೇಖರ ಬೀರನಳ್ಳಿ ವಹಿಸಿಕೊಂಡಿದ್ದರು.
ಅನುಗ್ರಹ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಅನಿಲ ರೆಡ್ಡಿ, ಶಿಲ್ಪಾ ಅಲ್ಲದ ಪ್ರಾಂಶುಪಾಲರು, ಎಂ. ಎಸ್. ಇರಾಣಿ ಪದವಿ ಪೂರ್ವ ಕಾಲೇಜು, ಆರೋಗ್ಯ ಘಟಕದ ಸಂಯೋಜನಾಧಿಕಾರಿಗಳಾದ ಡಾ. ನೀಲಕಂಠ ವಾಲಿ, ರಾ. ಸೇ. ಯೋಜನೆ ‘ಅ’ ಮತ್ತು ‘ಬ’ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ. ಪ್ರಾಣೇಶ ಎಸ್ ಮತ್ತು ಡಾ. ಶಂಕ್ರಪ್ಪ, ಡಾ. ಜಯಶ್ರೀ ಬಡೀಗೆರ ಐಕ್ಯೂಎಸಿ ಸಂಯೋಜಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾಯ್ರಕ್ರಮದ ನಿರ್ವಹಣೆ ಡಾ. ಮೈತ್ರಾದೇವಿ ಹಳೆಮನಿ ಮಾಡಿದರು, ಡಾ. ಶಂಕ್ರಪ್ಪ ಕೆ ವಂದಿಸಿದರು ಹಾಗು ಮಹಾವಿದ್ಯಾಲಯದ ಎಲ್ಲಾ ಬೋಧಕ ಮತ್ತು ಬೋಧಕೆತರ ಸಿಬ್ಬಂದಿಗಳು, ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.