ಎಂ.ಎಸ್ಸಿಯಲ್ಲಿ ಎರಡನೇ ರ್ಯಾಂಕ್ ಪಡೆದ ರೋಹಿಣಿ

ಬೀದರ್:ಮಾ.16: ನಗರದ ರೋಹಿಣಿ ಎಂ.ಎಸ್. ಅವರು ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಪೀಠದಲ್ಲಿ ಎರಡನೇ ರ್ಯಾಂಕ್‍ನೊಂದಿಗೆ ಎಂ.ಎಸ್ಸಿ (ಪ್ರಾಣಿಶಾಸ್ತ್ರ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಬೀದರ್‍ನ ಕರ್ನಾಟಕ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಓದಿದ್ದ ರೋಹಿಣಿ, ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿದ್ದಾರೆ. ರೋಹಿಣಿ ಅವರು ಹಿರಿಯ ಪತ್ರಕರ್ತ ಮಾರುತಿ ಸೋನಾರ್ ಅವರ ಪುತ್ರಿ.

ಜೆ.ಎಸ್.ಎಸ್ ಕಾಲೇಜಿನಲ್ಲಿ ನಡೆದ ಪದವೀಧರರ ದಿನಾಚರಣೆ ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಸಿ. ಶಿಖಾ ಅವರು ಪದವಿ ಪ್ರದಾನ ಮಾಡಿದರು.

ಸುತ್ತೂರು ಮಠದ ಜಗದ್ಗುರುಗಳು, ಜೆ.ಎಸ್.ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಸಿ.ಎಸ್. ಬೆಸ್ತರಮಠ ಮತ್ತಿತರ ಗಣ್ಯರು ಇದ್ದರು.