ಎಂ.ಎಲ್.ಸಿ ಚುನಾವಣೆ ನಿಮಿತ್ಯ

೧೯ರಂದು ನಳಿನ್ ಕುಮಾರ ಕಟೀಲ್ ಮಂತ್ರಿಗಳು ಆಗಮನ ಶಿವನಗೌಡ ನಾಯಕರಿಂದ ಸ್ಥಳ ವೀಕ್ಷಣೆ
ಸಿರವಾರ.ನ.೧೬-ಮುಂಬರುವ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಸಮಾವೇಶವನ್ನು ಇದೇ ೧೯ರಂದು ಸಿರವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಾಕ್ರಮಕ್ಕೆ ಬಿಜೆಪಿ ಪಕ್ಷದ ರಾಜ್ಯದ್ಯಕ್ಷ ನಳಿನ ಕುಮಾರ ಕಟಿಲ್ ಸೇರಿ ಸುಮಾರ ೧೦ಕ್ಕೂ ಅಧಿಕ ಮಂತ್ರಿಗಳು ಆಗಮಿಸುತ್ತಾರೆ ಎಂದು ದೇವದುರ್ಗ ಶಾಸಕರು ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣ ಮಾನ್ವಿ ರಸ್ತೆಯಲ್ಲಿರುವ ಬ್ರಿಜೇಶ ಪಾಟೀಲ್ ಅವರ ನಿವಾಸದ ಹಿಂದುಗಡೆ ಸಮಾವೇಶ ನಡೆಸಲು ಸೋಮವಾರ ಸ್ಥಳ ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು ಕೇಂಧ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಉತ್ತಮವಾಗಿ ಆಡಳಿತ ಮಾಡುತ್ತಿದ್ದು. ಡಾಬಾ ಸಂಸ್ಕೃತಿಯನ್ನು ತೊಡೆದುಹಾಕಿ ಕಾರ್ಯಕರ್ತರ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಪ್ರತಿಯೊಬ್ಬ ಕಾರ್ಯಕರ್ತರಿಗೆ ಅವಕಾಶಗಳನ್ನು ನೀಡುತ್ತಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ಎಲ್ಲಾರೂ ಶ್ರಮಿಸುವ ಮೂಲಕ ನಮ್ಮ ಅಭ್ಯರ್ಥಿಯಾಗಿರುತ್ತಾರೆ.ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕಗಳಿಗೆ ಸಿರವಾರ ಕೇಂದ್ರವಾಗಿರುವುದರಿಂದ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳಲಾಗುತ್ತಿದೆ.ರಾಜ್ಯಧ್ಯಕ್ಷರಾದ ನಳಿನ ಕುಮಾರ ಕಟಿಲ್ ಅವರೊಂದಿಗೆ ೧೦ ಜನ ಸಚಿವರು, ರಾಯಚೂರು ಕೊಪ್ಪಳ ಸಂಸದರು, ಜಿಲ್ಲೆಯ ಶಾಸಕರು,ಜಿ.ಪಂ,ತಾ.ಪಂ ಮಾಜಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಸೇರಿ ೫-೬ ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೇ ಎಂದರು.
ಸುದ್ದಿಗೋಷ್ಠಿ:- ಇದೇ ತಿಂಗಳು ೧೯ ರಂದು ಸಿರವಾರದಲ್ಲಿ ಜನ ಸ್ವರಾಜ್ಯ ಕಾರ್ಯಕ್ರಮದ ಕುರಿತು ಮಾನ್ವಿ-ಸಿರವಾರ ಬಿಜೆಪಿ ಮಂಡಲದಿಂದ ಜೆ.ಶರಣಪ್ಪಗೌಢ ನೇತೃತ್ವದಲ್ಲಿ ಇಂದು(ಮಂಗಳವಾರ) ಜೆ.ಬಸವ ಕಾಂಪ್ಲೇಕ್ಸ್ ನಲ್ಲಿ ಸುದ್ದಿಗೋಷ್ಠಿ ಮಾಡಿ ಕಾರ್ಯಕ್ರಮದ ಬಗ್ಗೆ ಹೇಳಲಾಯಿತು. ಸಿರವಾರ ತಾಲೂಕ ಅಭಿವೃದ್ದಿ ಬಗ್ಗೆ ಪಟ್ಟಣಕ್ಕೆ ಆಗಮಿಸುವ ಸಚಿವರಲ್ಲಿ ಗಮನ ಹರಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಮಾನ್ವಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಜಿಲ್ಲಾ ಉಪಾಧ್ಯಕ್ಷ ನರಸಿಂಹ ಕುಲಕರ್ಣಿ,ಶಿವಶರಣಗೌಡ ಲಕ್ಕಂದಿನ್ನಿ, ಉಮೇಶ ಸಜ್ಜನ್,ನಾಗರಾಜಗೌಢ, ಜೆ.ದೇವರಾಜಗೌಢ, ತಾ.ಪಂ ಮಾಜಿ ಅಧ್ಯಕ್ಷ ದೇವರಾಜ ಕುರುಕಂದ, ಜಿ.ಪಂ ನಾಮನಿರ್ಧೇಶಕ ಜಯರಾಜ್,ಮಲ್ಲೇಶನಾಯಕ ಕಡದಿನ್ನಿ, ಗುರುನಾಥ ರೆಡ್ಡಿ, ಎ.ಪಿ.ಎಂ.ಸಿ ಸದಸ್ಯ ಮೌಲಾಸಾಬ ಗಣದಿನ್ನಿ, ದೇವರಾಜ ಸ್ವಾಮಿ, ಸಿರವಾರ ಮಂಡಲ ಅದ್ಯಕ್ಷ ರಮೇಶ ಚಿಂಚರಕಿ, ರಮೇಶ ಶೇಟ್ಟಿ,ಉಮಾಶಂಕರ ಜೇಗರಕಲ್,ಕೃಷ್ಣನಾಯಕ, ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಬಿ.ರಾಮಯ್ಯ, ಪ.ಪಂ ನಾಮನಿರ್ದೇಶಿತ ಸದಸ್ಯ ನಾಗಪ್ಪ,ಮಹೇಶಪಾಟೀಲ್, ರಾಜಪ್ಪಹೊನ್ಟಟಗಿ, ಚನ್ನೂರು ಚನ್ನಪ್ಪ, ಪಂಪಾಪತಿ ಸಾಹುಕಾರ,ಹೆಚ್.ಕೆ.ಅಮರೇಶ, ಮುತ್ತಣ್ಣ,ವಾಯಿದ್, ಮಿಥುನ ಚ್ಯಾಗಿ, ಆಯತ ಸೇರಿದಂತೆ ಇನ್ನಿತರರು ಇದ್ದರು.