ಎಂ. ಎನ್ ಮಲ್ಲೇಶ್ ಅವರಿಗೆ ಸನ್ಮಾನ

ದಾವಣಗೆರೆ ಜು.21;  ತಾಲ್ಲೂಕಿನ ನಿಟುವಳ್ಳಿ ಜ್ಞಾನ ಭಾರತಿ ವಿದ್ಯಾಲಯದ ಸಂಸ್ಥಾಪಕ ಕಾರ್ಯದರ್ಶಿಗಳಾದ ಎಂ.ಎನ್ ಮಲ್ಲೇಶ್ ಶ್ಯಾಗಲೆ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ಸಿದ್ದಗಂಗಾ ವಿದ್ಯಾಸಂಸ್ಥೆಯು “ಶಿಕ್ಷಣ ರತ್ನ” ನೀಡಿ ಗೌರವಿಸಿ ಸನ್ಮಾನಿಸಿದೆ. ಶಿಕ್ಷಣ ರತ್ನ ಪ್ರಶಸ್ತಿ ಪಡೆದ ಮಲ್ಲೇಶ್ ಅವರಿಗೆ ಹಾವೇರಿ ಜಿಲ್ಲಾ ಬಿಜೆಪಿ ಸಂಘಟನಾ ಪ್ರಭಾರಿಗಳಾದ ಎಲ್. ಎನ್ ಕಲ್ಲೇಶ್ ಹಾಗೂ ಜೆ ಹೆಚ್ ಬಡಾವಣೆಯ ಹಿರಿಯ ವರ್ತಕರಾದ ನಿಜಣ್ಣ, ಕೇರಂ ಗಣೇಶ್, ವಾರ್ತಾ ಇಲಾಖೆ ಗಂಗಾಧರಸ್ವಾಮಿ, ಶಿಕ್ಷಕರಾದ ಮುರಳೀಧರ ಇವರು ಅಭಿನಂದನೆಗಳನ್ನು ತಿಳಿಸಿ ಸನ್ಮಾಸಿದ್ದಾರೆ.