ಎಂ ಎಂ. ಜೋಶಿ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ


ಹುಬ್ಬಳ್ಳಿ,ಮಾ.2: ಎಂ ಎಂ. ಜೋಶಿ ಕಣ್ಣಿನ ಆಸ್ಪತ್ರೆ ಐಸಿರಿ ಕಟ್ಟಡವನ್ನು ಶುಕ್ರವಾರ ಹುಬ್ಬಳ್ಳಿಯಲ್ಲಿ ಉಪರಾಷ್ಟ್ರಪತಿ ಜಗದೀಪ ಧನಖರವರು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಎಂ. ಎಂ. ಜೋಶಿ ಅವರ ಆರೋಗ್ಯ ಕ್ಷೆತ್ರದ ಸಾಧನೆ ಅಪಾರ. ತಾಂತ್ರಕತೆ ಬಳಸಿಕೊಂಡು, ಹೊಸ ಪ್ರಯೋಗಗಳ ಮೂಲಕ ಜನಸಾಮಾನ್ಯರ ಸೇವೆ ಮಾಡುತ್ತಿದ್ದಾರೆ ಎಂದು ಎಂ. ಎಂ.ಜೋಶಿ ಅವರ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮನಸ್ಸು ಶುದ್ಧವಾಗಿಟ್ಟುಕೊಂಡು ಸೇವಾಮನೋಭಾವದಿಂದ ಕೆಲಸ ಮಾಡಿದರೆ ಖಂಡಿತವಾಗಿ ಸಾಧನೆ ನಿಮ್ಮದಾಗುತ್ತದೆ. ಅದಕ್ಕೆ ಎಂ.ಎಂ.ಜೋಶಿ ಅವರೆ ನಿದರ್ಶನ ಎಂದರು.
ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಜಗತ್ತಿನಲ್ಲಿ ಭಾರತ ಆರ್ಥಿಕತೆಯಲ್ಲಿ ಪ್ರಸ್ತುತ 5ನೇ ಸ್ಥಾನದಲ್ಲಿದೆ. ಇದಕ್ಕೆ ರಾಷ್ಟ್ರದ ಆರೋಗ್ಯ ಕ್ಷೇತ್ರದ ಕೊಡುಗೆಯು ಅಪಾರ ಎಂದರು.
ರಾಜ್ಯ ಕಾನೂನು, ನ್ಯಾಯ ಮಾನನ ಹಕ್ಕುಗಳು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅವರು ಮಾತನಾಡಿ, ಡಾ. ಎಂ. ಎಂ ಜೋಶಿ ಅವರಲ್ಲಿ ಪ್ರಮುಖವಾದ ಎರಡು ಗುಣಗಳಿವೆ. ಮಾನವೀಯತೆ ಹಾಗೂ ದೈವಿ ಗುಣಗಳು. ಇದರಿಂದ ಅವರು ಸಮಾಜದಲ್ಲಿನ ಅಶಕ್ತರ ಆರೊಗ್ಯ ಸುದಾರಣೆಗೆ ಹಗಲಿರುಳು ಶ್ರಮಿಸಿ, ಮಹತ್ವದ ಸಾಧನೆ ಮಾಡಿದ್ದಾರೆ. ಹುಬ್ಬಳಿಯಿಂದ ತಮ್ಮ ಸೇವೆ ಆರಂಭಿಸಿ ಲಕ್ಷಾಂತರ ಬಡವರಿಗೆ ನೆರವಾಗಿದ್ದಾರೆ. ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ಕಣ್ಣಿನ ಹೆಲ್ತ ಕ್ಯಾಂಪ ಮಾಡಿ ಅಪಾರ ಜನರಿಗೆ ನೆರವು ನೀಡಿದವರು ಇವರು. ರಾಜ್ಯದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ವೈದ್ಯರಲ್ಲಿ ಎಂ.ಎಂ. ಜೋಶಿ ಒಬ್ಬರಾಗಿದ್ದಾರೆ. ಇಂದು ಉದ್ಘಾಟನೆಯಾದ ಐಸಿರಿ ಆಸ್ಪತ್ರೆ ಕಟ್ಟಡ ಬಡವರ ಆಶಾಕಿರಣವಾಗಲಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ತೆಂಗಿನಕಾಯಿ, ಶ್ರೀನಿವಾಸ್ ಮಾನೆ, ಎಂ. ಆರ್. ಪಾಟೀಲ, ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ವೀಣಾ ಬಾರದ್ವಾಡ್, ಎಂ.ಎಂ. ಜೋಶಿ ಆಸ್ಪತ್ರೆಯ ಸಂಸ್ಥಾಪಕರಾದ ಪದ್ಮ ಡಾ. ಎಂ. ಎಂ. ಜೋಶಿ, ಶ್ರೀಮತಿ ಪ್ರಮೀಳಾ ಜೋಶಿ, ಡಾ. ಶ್ರೀನಿವಾಸ್ ಜೋಶಿ ಉಪಸ್ಥಿತರಿದ್ದರು.