ಎಂ.ಈರಣ್ಣ ಹುಟ್ಟು ಹಬ್ಬ – ಹಣ್ಣು, ಹಂಪಲ ವಿತರಣೆ

ರಾಯಚೂರು.ಮೇ.28- ಮೆಕೊ ಕಂಪನಿಯ ಅಧ್ಯಕ್ಷರಾದ ಎಂ.ಈರಣ್ಣ ಅವರ 63 ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು, ಹಂಪಲ ವಿತರಿಸಲಾಯಿತು.
ಸರ್ಕಾರಿ ಆಸ್ಪತ್ರೆಯ ಎಲ್ಲಾ ಒಳ ರೋಗಿಗಳಿಗೆ ಹಣ್ಣು, ಹಂಪಲ ವಿತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ತಾಜ್ ಕನ್ಸ್‌ಟ್ರಕ್ಷನ್ ಮಾನ್ವಿಯ ಜಾಕೀರ್ ಮೋಹಿನುದ್ದೀನ್, ಡಾ.ಮಲ್ಲಿಕಾರ್ಜುನ ಬೊಮ್ಮನಾಳ, ಡಾ.ಖಾಜಾ ಹುಸೇನ್ ನೀರಮಾನ್ವಿ, ಎಂ.ಆಲಂ ಫ್ರೇಂಡ್ಸ್ ಪಂಕ್ಷನ್ ಹಾಲ್, ಸಿದ್ದಾರ್ಥ್, ಜಗದೀಶ ಸೇರಿದಂತೆ ಇತರರು ಹಣ್ಣು ಹಂಪಲ ವಿತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.