ಎಂ. ಈರಣ್ಣ ವೃತ್ತ : ತರಕಾರಿ ವ್ಯಾಪರಸ್ಥರ ರೈತರನ್ನು ತೆರವುಗೊಳಿಸಿ- ಮಹಾವೀರ

ರಾಯಚೂರು.ನ.೧೮- ಎಂ. ಈರಣ್ಣ ವೃತ್ತದಲ್ಲಿ ತರಕಾರಿ ವ್ಯಾಪರಸ್ಥರನ್ನು ಹಾಗೂ ರೈತರನ್ನು ತೆರವುಗೊಳಿಸಲು ನಗರಸಭೆ ಪೌರಾಯುಕ್ತರು ಹಾಗೂ ಸಂಚಾರ ಪೋಲಿಸರು ಮುಂದಾಗಬೇಕೆಂದು ರಾಯಚೂರು ನಗರ ಉಸ್ಮಾನೀಯ ತರಕಾರಿ ಮಾರಾಟಗಾರರು ಕ್ಷೇಮಾ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಮಹಾವೀರ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂ. ಈರಣ್ಣ ವೃತ್ತದಲ್ಲಿ ತರಕಾರಿ ವ್ಯಾಪಾರಸ್ಥರು ಹಾಗೂ ರೈತರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ತೊಂದರೆ ಆಗುತ್ತಿದೆ ಹಾಗೂ ದ್ವೀಚಕ್ರವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ, ಆಟೋ ರಿಕ್ಷಾ ಸವಾರರಿಗೆ, ಶಾಲಾ, ಕಾಲೇಜು ಬಸ್ ಚಾಲಕರಿಗೆ ಜನದಟ್ಟನೆಯಿಂದ ಸಂಚಾರಕ್ಕೆ ಅಡ್ಡಿಯಾಗಿದೆ.
ನಗರಸಭೆ ಸದಸ್ಯರುಗಳಾದ ರವೀಂದ್ರ ಜಾಲ್ದಾರ್, ಕಡಗೋಲ್ ಅಂಜೀನಯ್ಯ, ಹರೀಶ ನಾಡಗೌಡ, ನಗರದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಎಂ. ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡುಕೊಡುವುದಾಗಿ ಹೇಳಿ ತರಕಾರಿ ಮಾರಾಟಗಾರರನ್ನು ಹಾಗೂ ರೈತರನ್ನು ಉಸ್ಮಾನೀಯ ತರಕಾರಿ ಮಾರುಕಟ್ಟೆಗೆ ಹೋಗಲು ಬಿಡುತ್ತಿಲ್ಲ. ರವೀಂದ್ರ ಜಾಲ್ದಾರ್ ಅವರು ರೈತರನ್ನು ಹಾಗೂ ತರಕಾರಿ ಮಾರಾಟಗಾರರನ್ನು ಇಲ್ಲೇ ಕೂಡಿ ವ್ಯಾಪಾರ ಮಾಡಿ ಯಾರು ಬರುತ್ತಾರೆ ನೋಡಿಕೊಳ್ಳುತ್ತೇನೆಂದು ಹೇಳುತ್ತಿದ್ದಾರೆ.
ರವೀಂದ್ರ ಜಾಲ್ದಾರ್ ಅವರು ಒತ್ತಾಯ ಪೂರಕವಾಗಿ ಕೂಡಿಸುತ್ತಿದ್ದಾರೆ. ಜಾಲ್ದಾರ್ ಅವರು ಏನ್ ಮಾಡುತ್ತಿದ್ದೀರಿ ಏನು ಮಾಡಿದ್ದೀರಿ ಎಂದು ನಮ್ಮಗೆ ಗೊತ್ತಿದೆ. ಅವರು ಒತ್ತಾಯ ಪೂರಕವಾಗಿ ತರಕಾರಿ ವ್ಯಾಪಾರಸ್ಥರನ್ನು ಹಾಗೂ ರೈತರನ್ನು ಕೂಡಿಸಿ ಹಾಳು ಮಾಡುತ್ತಿದ್ದಾರೆ. ನಗರಸಭೆ ಪೌರಾಯುಕ್ತರಿಗೆ ಸಾಕಷ್ಟು ಭಾರೀ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ತೆರವುಗೊಳಿಸದಿದ್ದರೆ ಪೌರಾಯುಕ್ತರ ವರ್ಗಾವಣೆಗೊಳಿಸಲು ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಭು ನಾಯಕ ಇನ್ನಿತರರು ಉಪಸ್ಥಿತರಿದ್ದರು.