ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ಪರವಾನಿಗೆ ನೀಡಲು ರೈತರು ಒತ್ತಾಯ

ರಾಯಚೂರು,ಆ.೬- ನಗರದ ಎಂ.ಈರಣ್ಣ ವೃತ್ತದಲ್ಲಿ ಇರುವ ತರಕಾರಿ ಮಾರಾಟ ಮಾಡಲು ಬೆಳಗ್ಗೆ ೪ ರಿಂದ ೯ ಗಂಟೆಯವರೆಗೆ ಮಾರಾಟ ಮಾಡಲು ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿ
ಮಲಿಯಾಬಾದ,ತುಂಟಾಪೂರು, ಸಿದ್ರಾಂಪೂರು,ರಾಜಲಬಂಡಾ,ಗೋನ್ಹಾರ , ದೇವನಪಲ್ಲಿ ಗ್ರಾಮಗಳ ರೈತರು ನಗರಸಭೆ ಪೌರಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಸುತ್ತಮುತ್ತಲಿನ ಗ್ರಾಮದ ರೈತರು ಎಂ.ಈರಣ್ಣ ವೃತ್ತದಲ್ಲಿ ಬೆಳಗ್ಗೆ ೦೪ ಗಂಟೆಯಿಂದ ೯.೦೦ ಗಂಟೆಯವರಗೆ ತರಕಾರಿ ಸೊಪ್ಪು ( ಪಲ್ಲೆ ) ಯನ್ನು ಕಳೆದ ೩ ವರ್ಷಗಳಿಂದ ತರಕಾರಿ ಸೊಪ್ಪು ( ಪಲ್ಲೆ ) ಯನ್ನು ಮಾರಾಟ ಮಾಡುತ್ತಾ ನಮ್ಮ ಉಪ ಜೀವನವನ್ನು ನಡೆಸುತ್ತಿದ್ದೇವೆ.ಈ ತರಕಾರಿ ಸೊಪ್ಪು ಮಾರಾಟದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುತ್ತಿಲ್ಲ. ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದರಿಂದ ವಾರ್ಡ ನಂ.೧೨ ಪೌರಕಟ್ಟ ,೧೩ ಜಹೀರಾಬಾದ ,೧೪ ಮಂಗವಾರ ಪೇಟೆ , ೧೫ ನೇಜಾಜಿ ನಗರ ಜಾನಿಯಾ ಮೊಹಲ್ಲ ಮತ್ತು ತಿಮ್ಮಾಪೂರು ಪೇಟೆ. ಜಿ.ಡಿ.ತೋಟ ರವರೆಗಿನ ಸಾರ್ವಜನಿಕರಿಗೆ ತಮ್ಮ ದಿನನಿತ್ಯದ ತರಕಾರಿಯನ್ನು ಖರೀದಿಸಲು ತುಂಬಾ ಅನುಕೂಲವಾಗುತ್ತಿದೆ. ಉಸ್ಮಾನಿಯಾ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ನಮಗೆ ಅವಕಾಶವಿಲ್ಲ ಏಕೆಂದರೆ ಸದರಿ ಮಾರುಕಟ್ಟೆಯಲ್ಲಿ ಈಗಾಗಲೇ ಕಾಯಿಪಲ್ಲೆ ಮಾರಾಟಗಾರರು ಬಾಡಿಗೆ ಕಟ್ಟೆಗಳನ್ನು ಬಾಡಿಗೆ ಪಡೆದುಕೊಂಡು ವ್ಯವಹರಿಸುತ್ತಿದ್ದಾರೆ . ಆದ್ದರಿಂದ ಎಂ.ಈರಣ್ಣ ರವರ ವೃತ್ತದಲ್ಲಿ ತರಕಾರಿ ಸೊಪ್ಪು ( ಪಲ್ಲೆ ) ಮಾರಾಟಗಾರರಿಗೆ ಬೆಳಗ್ಗೆ ೪ ಗಂಟೆಯಿಂದ ೯ ಗಂಟೆಯವರೆಗೆ ಕಾಯಿಪಲ್ಲೆ ಸೊಪ್ಪನ್ನು ಮಾರಾಟ ಮಾಡಲು ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರದ ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.