ಎಂ.ಈರಣ್ಣ ವೃತ್ತ:ತರಕಾರಿ ಮಾರಾಟಗಾರ ರನ್ನು ತೆರವುಗೊಳಿಸದಿದ್ದರೆ ಹೋರಾಟ


ರಾಯಚೂರು,ನ.೨೪- ಡಿ.೧೨ ಒಳಗಾಗಿ ಎಂ.ಈರಣ್ಣ ವೃತ್ತದಲ್ಲಿ ವ್ಯಾಪಾರ ಮಾಡುವ ತರಕಾರಿ ಮಾರಾಟಗಾರರನ್ನು ಮತ್ತು ರೈತರನ್ನು ತೆರವುಗೊಳಿಸದಿದ್ದರೆ ನಗರ ಶಾಸಕ ಹಾಗೂ ನಗರ ಸಭೆ ಕಛೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾವೀರ್ ಹೇಳಿದರು.
ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಗಾರರನ್ನು ಹಾಗೂ ರೈತರನ್ನು ತೆರವು ಗೊಳಿಸಬೇಕೆಂದು ಸಾಕಷ್ಟು ಬಾರಿ ನಗರಸಭೆ ಪೌರಾಯುಕ್ತ ರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ
ಡಿ.೧೨ ಒಳಗಾಗಿ ಎಂ.ಈರಣ್ಣ ವೃತ್ತದಲ್ಲಿ ವ್ಯಾಪಾರ ಮಾಡುವ ತರಕಾರಿ ಮಾರಾಟಗಾರರನ್ನು ಮತ್ತು ರೈತರನ್ನು ತೆರವುಗೊಳಿಸದಿದ್ದರೆ ನಗರ ಶಾಸಕ ಹಾಗೂ ನಗರ ಸಭೆ ಕಛೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.