ಎಂ.ಆರ್ ಪಿ ಟ್ರೈಲರ್ ಬಿಡುಗಡೆ

ದಢೂತಿ ದೇಹದಿಂದಲೇ ಗಮನ ಸೆಳೆದಿರುವ ಹಾಸ್ಯ ನಟ ಹರಿ ನಾಯಕನಾಗಿರುವ  “ಎಂ.ಆರ್ ಪಿ”  ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಿರ್ದೇಶಕ ಬಾಹುಬಲಿ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಎಂ.ಡಿ ಶ್ರೀಧರ್, ಎ.ವಿ ಕೃಷ್ಣಕುಮಾರ್, ಮೋಹನ್ ಕುಮಾರ್  ಹಾಗು ಪ್ರೊಡಕ್ಷನ್ ಮ್ಯಾನೇಜರ್ ರಂಗಸ್ವಾಮಿ  ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಟ್ರೈಲರ್ ಬಿಡುಗಡೆಗೆ ಸಂಗೀತ ನಿರ್ದೇಶಕ ಸಾಧು ಕೋಕಿಲ, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ವಸಿಷ್ಠ ಸೇರಿದಂತೆ ಹಲವರು ಆಗಮಿಸಿ ಚಿತ್ರಕ್ಕೆ  ಶುಭ ಹಾರೈಸಿದರು.

ವೇಳೆ ಮಾತನಾಡಿದ ನಿರ್ದೇಶಕ ಬಾಹುಬಲಿ, ಅಪ್ಪು ಸರ್ ಕರೆದು ಶುಭ ಕೋರಿದ್ದರು.ಅವರನ್ನು‌ ಮಿಸ್ ಮಾಡಿಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ, ಚಿತ್ರದಲ್ಲಿ ನಾಯಕ ಬೊಜ್ಜು  ಇರುವಾತಣ  ನಾನು ಇರುವುದು ಹೀಗೆ ಎಂದು ಎಲ್ಲರನ್ನು ಬದಲಾಯಿಸುತ್ತಾನೆ. ಲವ್, ಸಾಂಗ್, ಪೈಟು ಎಲ್ಲವೂ ಇದೆ. ಸಿನಿಮಾದಲ್ಲಿ ಜಗ್ಗೇಶ್ ಅವರು  ಧ್ವನಿ ಮೂಲಕ ಇಡೀ ಸಿನಿಮಾ ನಾಯಕನ ಜೊತೆ ಜರ್ನಿ ಸಾಗಲಿದೆ. ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಮಾಹಿತಿ ಹಂಚಿಕೊಂಡರು.

ನಿರ್ಮಾಪಕ ಎಂ.ಡಿ ಶ್ರೀಧರ್,  ಹೆಣ್ಣಿನ ವಯಸ್ಸು, ಸಿನಿಮಾ ಬಜೆಟ್ ಕೇಳಬೇಡಿ , ನನ್ನ ಜೊತೆ ಕೆಲಸ ಮಾಡಿದ ಬಾಹುಬಲಿ ಅವರಿಗೆ ಒಳ್ಳೆಯದಾಗಲಿ ಎಂದರು.‌ ನಾಯಕ ಹರಿ, ಕಷ್ಟಪಟ್ಟು ಮಾಡಿದ್ದೇನೆ ಎಲ್ಲರ ಸಹಕಾರವಿರಲಿ ಎಂದರು. ಸಂಗೀತ ಹರ್ಷವರ್ಧನ್ , ಛಾಯಾಗ್ರಹಣ ಗುಂಡ್ಲುಪೇಟೆ ಸುರೇಶ್ ಸೇರಿ ಹಲವು ಮಾಹಿತಿ ಹಂಚಿಕೊಂಡರು.