ಎಂ.ಆರ್.ಗುರುರಾಜ ಸಕ್ರೀಯ ರಾಜಕೀಯಕ್ಕೆ ಎಂಟ್ರಿ!

ರಾಯಚೂರು,ಏ.೩೦-
ಬ್ರಾಹ್ಮಣ ಸಮಾಜದ ಪ್ರಭಾವಿ ಮುಖಂಡರು ಮತ್ತು ಬಿಜೆಪಿ ಬಲಿಷ್ಠ ನಾಯಕರಾದ ಎಂ ಆರ್ ಗುರುರಾಜ ರಾಂಪೂರ ಇವರು ನಗರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.ಕಾರಣಾಂತರಗಳಿಂದ ರಾಜಕೀಯ ಚಟುವಟಿಕೆಯಿಂದ ದೂರವಿದ್ದರು.
ರೈಲ್ವೆ ಬೋರ್ಡ ಸದಸ್ಯರು ಮತ್ತು ಬಿಜೆಪಿ ಉಪಾಧ್ಯಕ್ಷರಾದ ಬಾಬುರಾವ್ ಮತ್ತು ಶಾಸಕರ ಸಹೋದರ ಪಂಪನಗೌಡ ಅವರು ಗುರುರಾಜರ ಮನೆಗೆ ತೆರಳಿ ಸಕ್ರೀಯ ರಾಜಕೀಯದಲ್ಲಿ ತೊಡಗುವಂತೆ ಮನವೋಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ ಪಾಟೀಲರ ಪರ ಪ್ರಚಾರದಲ್ಲಿ ತೊಡಗಲು ಕೋರಿದರು. ಪಕ್ಷದಲ್ಲಿ ಸಕ್ರೀಯರಾಗಿರಲು ಒತ್ತಾಯಿಸಿದರು.ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.