ಎಂ. ಆರ್. ಅಮೃತಲಕ್ಷ್ಮಿಗೆ ಪಿ. ಹೆಚ್. ಡಿ ಪದವಿ ಪ್ರಧಾನ

ಸಂಜೆವಾಣಿ ವಾರ್ತೆ

ಹಿರಿಯೂರು. ಮಾರ್ಚ್- 13 ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದ 11ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹಿರಿಯೂರಿನ ಎಂ. ಆರ್.  ಅಮೃತಲಕ್ಷ್ಮಿಯವರು ಕರ್ನಾಟಕ ಸರ್ಕಾರದ ಘನತೆವೆತ್ತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ರವರಿಂದ ಪಿ. ಎಚ್. ಡಿ ಪದವಿ ಪಡೆದರು.  ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಡಿ.  ಜಿ.  ಪ್ರಕಾಶ ರವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಮ್ ಸ್ಟಡೀಸ್ ಆನ್ ಕಾಂಟ್ಯಾಕ್ಟ್ ಮೆಟ್ರಿಕ್ ಮ್ಯಾನಿಫೋರ್ಡ್ಸ್ ಎಂಬ ಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯ ಎಂ.  ಆರ್.  ಅಮೃತ ಲಕ್ಷ್ಮಿರವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಘಟಿಕೋತ್ಸವ ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿಯ ಕುಲಪತಿಗಳಾದ ಪ್ರೊ.  ಬಿ.  ಡಿ. ಕುಂಬಾರ, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.  ಸಿ.  ಸುಧಾಕರ್,  ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಎ. ಎಸ್. ಕಿರಣ್ ಕುಮಾರ್  ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು