ಎಂಸಿಎ ನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿಕೆ

ಕಲಬುರಗಿ:ನ.19:ಸರ್ಕಾರದ ಜಾಹೀರಾತು ಸಂಸ್ಥೆಯಾದ ಮೆ|| ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಯು 2020-21ನೇ ಸಾಲಿನ ತನ್ನ ಲಾಭಾಂಶದಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ.

ಕೋವಿಡ್-19ರ ಸೋಂಕಿನಿಂದ ಕಳೆದ ಸಾಲಿನಲ್ಲಿ ಎ¯್ಲÁ ವ್ಯವಹಾರಗಳೂ ತಟಸ್ಥವಾಗಿದ್ದ ಪರಿಸ್ಥಿತಿ ಎಲ್ಲರಿಗೂ ತಿಳಿದಿರುವುದೇ. ಆದರೂ ಕಂಪನಿಯು ತನ್ನ ಪರಿಶ್ರಮ ಮತ್ತು ಸಮರ್ಪಿತ ಸೇವೆಯಿಂದ ಲಾಭ ಗಳಿಕೆಯ ಪಥದಲ್ಲಿ ಮುನ್ನಡೆಯುತ್ತಿದೆ.

ಕಂಪನಿಯ ಮಾನ್ಯ ಅಧ್ಯP್ಷÀರಾದ ಶ್ರೀ ಸಿ. ಮುನಿಕೃಷ್ಣ ರವರ ನೇತೃತ್ವದಲ್ಲಿ ಮತ್ತು ಮಾನ್ಯ ನಿರ್ದೇಶಕರುಗಳಾದ ಶ್ರೀ ಎಚ್.ಆರ್. ತೀರ್ಥಲಿಂಗಪ್ಪ ಮತ್ತು ಶ್ರೀ ವೀರೇಶ್ ಸಂಗಳದ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿಯವರ ಉಪಸ್ಥಿತಿಯಲ್ಲಿ ಚೆಕ್ ನೀಡಲಾಯಿತು. ಇದು ಕಂಪನಿಯ ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಹೊಂದಿರುವ ಕಾಳಜಿಯ ದ್ಯೋತಕವಾಗಿದೆ.