ಎಂಸಿಎ ನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ

 ದಾವಣಗೆರೆ.ನ.೧೮:- ಸರ್ಕಾರದ ಜಾಹೀರಾತು ಸಂಸ್ಥೆಯಾದ ಮೆ. ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಕಂಪನಿಯು 2020-21ನೇ ಸಾಲಿನ ತನ್ನ ಲಾಭಾಂಶದಿಂದ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ.ಕೋವಿಡ್-19ರ ಸೋಂಕಿನಿಂದ ಕಳೆದ ಸಾಲಿನಲ್ಲಿ ಎಲ್ಲ ವ್ಯವಹಾರಗಳೂ ತಟಸ್ಥವಾಗಿದ್ದ ಪರಿಸ್ಥಿತಿ ಎಲ್ಲರಿಗೂ ತಿಳಿದಿರುವುದೇ. ಆದರೂ ಕಂಪನಿಯು ತನ್ನ ಪರಿಶ್ರಮ ಮತ್ತು ಸಮರ್ಪಿತ ಸೇವೆಯಿಂದ ಲಾಭ ಗಳಿಕೆಯ ಪಥದಲ್ಲಿ ಮುನ್ನಡೆಯುತ್ತಿದೆ.ಕಂಪನಿಯ ಮಾನ್ಯ ಅಧ್ಯಕ್ಷ  ಸಿ. ಮುನಿಕೃಷ್ಣ ನೇತೃತ್ವದಲ್ಲಿ ಮತ್ತು ನಿರ್ದೇಶಕರುಗಳಾದ ಎಚ್.ಆರ್. ತೀರ್ಥಲಿಂಗಪ್ಪ ಮತ್ತು  ವೀರೇಶ್ ಸಂಗಳದ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ  ಸಿದ್ದಲಿಂಗಪ್ಪ ಬಿ. ಪೂಜಾರಿಯವರ ಉಪಸ್ಥಿತಿಯಲ್ಲಿ ಚೆಕ್ ನೀಡಲಾಯಿತು. ಇದು ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ಹೊಂದಿರುವ ಕಾಳಜಿಯ ದ್ಯೋತಕವಾಗಿದೆ.