ಎಂಬಿಎ ವಿಭಾಗದ ವಿದ್ಯಾರ್ಥಿಗಳು ಕೆ12 ಟೆಕ್ನೋ ಸರ್ವಿಸಸ್ ಕಂಪನಿಗೆ ಆಯ್ಕೆ

ದಾವಣಗೆರೆ.ಮೇ.೨೨; ಇತ್ತೀಚಿಗೆ ನಡೆದ ಕೆ 12 ಟೆಕ್ನೋ ಸರ್ವಿಸಸ್ ಕಂಪನಿಯ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂಐಟಿ ಕಾಲೇಜಿನ ಎಂ ಬಿ ಎ ವಿಭಾಗದಿಂದ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಂಪನಿಯು ಬಿಜಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್ ಜಾಬ್ ರೋಲ್ ನೀಡುವುದರ ಮೂಲಕ ವರ್ಷಕ್ಕೆ ಆರು ಲಕ್ಷಗಳ ಪ್ಯಾಕೇಜ್ ಘೋಷಿಸಿದೆ. ಇದುವರೆಗೂ ಎಂಬಿಎ ವಿಭಾಗದಲ್ಲಿ 97 ಜಾಬ್ ಆಫರ್ಸ್ ಸ್ವೀಕರಿಸಿದ್ದು, ಪ್ರತಿಯೊಬ್ಬರಿಗೂ ಕೆಲಸದ ಜಾಬ್ ಆಫರ್ ನೀಡಲಾಗುವುದು ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ  ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಾದ ಅಭಿಷೇಕ್ ಕೆ , ದೇವರಾಜ್ ಎನ್‌ಬಿ, ಮಂಜುನಾಥ ಎಚ್ಎಂ, ಪದ್ಮಶ್ರೀ ಕೆ ಪಿ, ಪ್ರಸಾದ್ ಡಿ, ರಕ್ಷಾ ಎನ್, ಪ್ರಿಯಾಂಕಾ ಎಂ, ಕೊಟ್ರೇಶ್ ಡಿ ಆರ್, ರವಿ ಕಿರಣ ಎಸ್ವಿ, ಸ್ವಪ್ನ, ವಚನ ಎಸ್ ಎಂ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಶ್ರೀ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ಶ್ರೀ ವೈಯೂ ಸುಭಾಷ್ ಚಂದ್ರ, ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ ಬಕ್ಕಪ್ಪ ಬಿ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ ಬಸವರಾಜ್ ಪಿ ಎಸ್,ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ ಶ್ರೀ ಕಟ್ಟಿಮನಿ ಟಿ ಆರ್, ವಿಭಾಗದ ಪ್ಲೇಸ್ಮೆಂಟ್ ಸಂಯೋಜಕರಾದ ಪ್ರೊ ವಿನಯ್ ಮತ್ತು ಪ್ರಾಧ್ಯಾಪಕ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.