ಎಂಪಿ ಚುನಾವಣೆ ಭದ್ರ ಬುನಾದಿಗೆ ಉಗ್ರಪ್ಪ ಸಿದ್ದತೆ

ಎನ್.ವೀರಭದ್ರಗೌಡಬಳ್ಳಾರಿ, ಅ.24: ಮುಂಬರುವ ಲೋಕಸಭಾ ಚುನಾವಣಾ ಸಿದ್ದತೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಭದ್ರ ಬುನಾದಿಗಾಗಿ ಸಿದ್ದತೆಗಳನ್ನು ನಡೆಸಿದ್ದಾರೆ.2018  ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 2.43,261 ಮತಗಳ ಅಂತರದಿಂದ ಆಯ್ಕೆಗೊಂಡಿದ್ದರು ಉಗ್ರಪ್ಪ ಅವರು.ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಆರು ತಿಂಗಳು ಕಾಲ ಕಾರ್ಯನಿರ್ವಹಿಸಿದರು. ಲೋಕಸಭೆ ಮತ್ತು ಕ್ಷೇತ್ರದಲ್ಲಿ ಜನ‌ಮನ ಆಕರ್ಷಿಸಿದ್ದರು. ಸಂಸತ್ ನಲ್ಲಿ ಪ್ರಧಾನಿ‌ ನರೇಂದ್ರ ಮೋದಿ ಅವರನ್ನು ರಫೇಲ್ ಯುದ್ದ ವಿಮಾನಗಳ ಖರೀದಿ ವಿಷಯದಲ್ಲಿ ಸೂಕ್ತ ರೀತಿಯಲ್ಲಿ ಪ್ರಶ್ನಿಸಿ ಗಮನ ಸೆಳೆದಿದ್ದರು. ಆದರೂ ಮೋದಿ ಅಲೆಯಲ್ಲಿ, ಪಕ್ಷ ವಿರೋಧಿಗಳ ಅಸಹಕಸರದಿಂದ. ನಂತರ  2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ವೈ ದೇವೇಂದ್ರಪ್ಪ ಅವರ ವಿರುದ್ದ 55 ಸಾವಿರದ 707 ಮತಗಳ ಅಂತರದಿಂದ ಸೋಲುಕಂಡರು.ಅದಕ್ಕೂ ಮೊದಲು ಬಳ್ಳಾರಿಯಲ್ಲಿ ಮನೆ ಮಾಡಿದ್ದರು. ನಂತರ ಮನೆ ಖಾಲಿ ಮಾಡಿ, ಬೆಂಗಳೂರಿನಿಂದ ಆಗಾಗ್ಗೆ ಬಂದು ಕ್ಷೇತ್ರದಲ್ಲಿ ಪಕ್ಷದ ಕಾರ್ಯಚಟುವಟಿಕೆ ಮತ್ತು ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು.ಈಗ  ಪಕ್ಷದ ವರಿಷ್ಟರ ಸೂಚನೆಯಂತೆ ಬಳ್ಳಾರಿಯ ಇನ್ನಾರೆಡ್ಡಿ ಕಾಲೋನಿ ಮತ್ತು ಹೊಸಪೇಟೆಯಲ್ಲಿ ಮನೆ ಮಾಡಿ, ಕ್ಷೇತ್ರದಲ್ಲಿ ಓಡಾಡಿ ಮತದಾರರ ಮನ ಸೆಳೆಯುವ ಕಾರ್ಯ, ಪಕ್ಷದ ಕಾರ್ಯಕರ್ತರ ಸಂಘಟನೆ, ಮುಖಂಡರ ವಿಶ್ವಾಸಗಳಿಸುವ ಕಾರ್ಯಕ್ಕೆ ಮುನ್ನಡಿ ಬರೆಯತೊಡಗಿದ್ದಾರೆ.ಕ್ಷೇತ್ರದಲ್ಲಿನ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಲಕುಸಿದ ಮತಗಳನ್ನು ಗಮನಸಿದರೆ ಗೆಲುವಿನ ಹಾದಿ ಇದೆ. ಆದರೆ ಲೊಖಸಭಾ ಚುನಾವಣೆಯ ಹಾದಿಯೇ ವಿಭಿನ್ನವಾಗಿರುತ್ತದೆ. ಅದಕ್ಕಾಗಿ ಇಗಿನಿಂದಲೇ ಅವರು ತಮ್ಮದೇ ರೀತಿಯ ಪ್ರಯತ್ನ ನಡೆಸಿದ್ದಾರೆ ಎನ್ನಬಹದು.ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಾನು, ಮತ್ತೆ ಇಲ್ಲಿಂದ ಸ್ಪರ್ಧೆ ಮಾಡಲು ಬಯಸಿ. ಪಕ್ಷದ ಉನ್ನತ ಮುಖಂಡರಿಗೆ ಕೋರಿದೆ. ಕ್ಷೇತ್ರದ ಮುಖಂಡರ ಸಂಪರ್ಕದಲ್ಲಿರುವೆ. ಕ್ಷೆತ್ರದ ಮತದಾರರ ಮಧ್ಯೆ ಬೆರೆಯಲು, ಚುನಾವಣೆಯ ದೃಷ್ಟಿಕೋನ ತಿಳಿಸುವ, ಪಕ್ಷ ಸಂಘಟನೆ ದೃಷ್ಟಿಯಿಂದ ಬಳ್ಳಾರಿ, ಹೊಸಪೇಟೆಯಲ್ಲಿ ಮನೆ ಮಾಡಿರುವೆ.ವಿ.ಎಸ್.ಉಗ್ರಪ್ಪ, ಮಾಜಿ ಸಂಸದರು, ಬಳ್ಳಾರಿ.