ಎಂಪಿಎಲ್ ೨೦೨೧ ಕ್ರಿಕೆಟ್ ಟೂರ್ನಿ: ಪವರ್ ಸ್ಪೋರ್ಟ್ಸ್ ಪ್ರಥಮ

ಮೂಡುಬಿದಿರೆ, ಮಾ.೨೪- ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆದ ಎಂಪಿಎಲ್-ಮೂಡುಬಿದಿರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಪವರ್ ಸ್ಪೋರ್ಟ್ಸ್ ತಂಡ ಪ್ರಥಮ, ಜಿ.ಸಿ.ಸಿ,ನಝ್ಮಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಟೀಮ್ ಟೆನ್ ತೃತೀಯ ಹಾಗೂ ಜಿಗರ್ ಮೈಂಡ್ ತಂಡ ಚತುರ್ಥ ಬಹುಮಾನ ಪಡೆದುಕೊಂಡಿದೆ.

ಸರಣಿಶ್ರೇಷ್ಠ ಪ್ರಶಸ್ತ್ರಿಯನ್ನು ನಝ್ಮಾ ತಂಡದ ಹಾರಿಸ್ ಪಡೆದುಕೊಂಡರೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪವರ್‌ಸ್ಪೋರ್ಟ್ಸ್ ತಂಡದ ಉನೈಸ್ ಪಡೆದುಕೊಂಡರು. ಜಿಗರ್‌ಮೈಂಡ್ ತಂಡದ ಅಲ್ತಾಫ್ ವಾಲ್ಪಾಡಿ ಉತ್ತಮ ದಾಂಡಿಗ, ಟೀಮ್‌ಟೆನ್ ತಂಡದ ತನ್ವೀರ್ ಉತ್ತಮ ಎಸೆತಗಾರ, ಸಾಯಿ ವಾರಿಯರ್ಸ್ ತಂಡದ ಪ್ರಮೋದ್ ಉತ್ತಮ ಗೂಟರಕ್ಷಕ ಹಾಗೂ ಪವರ್‌ಸ್ಪೋರ್ಟ್ಸ್ ತಂಡದ ಗಣೇಶ್ ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿ ಪಡೆದುಕೊಂಡರೆ ಕಲ್ಲಮುಂಡ್ಕೂರು ತಂಡವು ಶಿಸ್ತಿನ ತಂಡ ಪ್ರಶಸ್ತಿ ಪಡೆದು ಕೊಂಡಿದೆ.

ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ  ಕಂಬಳ ಕ್ಷೇತ್ರದ ಸಾಧಕ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ, ಸಂಗೀತ ಕ್ಷೇತ್ರದ ಸಾಧಕ ನಿಹಾಲ್ ತಾವ್ರೋ ಹಾಗೂ ಕಾರ್ ರೇಸರ್ ಶುಹೈಬ್ ಆಲಿ ಮತ್ತು ತೀರ್ಪುಗಾರರಾದ ಸತೀಶ್, ದೇಜಪ್ಪ ಹಾಗೂ ನಝೀರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ, ಚಿತ್ರ ನಿರ್ಮಾಪಕ ಅರುಣ್ ರೈ ತೋಡಾರ್ ಅವರನ್ನು ಗೌರವಿಸಲಾಯಿತು.

ಮೂಡುಬಿದಿರೆ ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಕರೀಂ, ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಬಿಜೆಪಿ ಮುಖಂಡರಾದ ಜಗದೀಶ ಅಧಿಕಾರಿ, ಸುಕೇಶ್ ಶೆಟ್ಟಿ, ಉದ್ಯಮಿಗಳಾದ ಅಬುಲ್ ಅಲಾ ಪುತ್ತಿಗೆ, ಜಾವೆದ್ ಶೇಖ್, ಪಡುಮಾರ್ನಾಡು ಗ್ರಾಪಂ ಸದಸ್ಯ ರಮೇಶ್ ಶೆಟ್ಟಿ, ಶ್ರೀಪತಿ ಭಟ್, ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ವೇಣುಗೋಪಾಲ್, ರೋಟರಿ ಟೆಂಪಲ್‌ಟೌನ್ ಅಧ್ಯಕ್ಷ ಸೀತಾರಾಮ ಆಚಾರ್ಯ, ರವೀಂದ್ರ ಆಚಾರ್ಯ, ಸುಕುಮಾರ್ ಅವಿನ್, ವಕೀಲ ಶಾಂತಿಪ್ರಸಾದ್ ಹೆಗ್ಡೆ,  ವಿಶಾಲ್ ತೋಡಾರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘಟಕ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ಪ್ರಜ್ಞಾ ವಾಲ್ಪಾಡಿ ಸನ್ಮಾನ ಪತ್ರವಾಚಿಸಿದರು. ರಫೀಝ್ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದರು.