ಎಂದಿಗೂ ಸ್ಥಿರವಾಗಿರಬೇಡಿ, ಸವಾಲುಗಳನ್ನು ಸ್ವೀಕರಿಸಿ: ಜಿಲ್ಲಾಧಿಕಾರಿ ಸ್ನೇಹಲ್

ಕಲಬುರಗಿ,ಜು.1:ಎಂದಿಗೂ ಸ್ಥಿರವಾಗಿರಬೇಡಿ, ಬೆಳೆಯಬೇಕಾದರೆ ನಿಮ್ಮನ್ನು ನೀವು ಸವಾಲುಗಳಿಗೆ ಒಡ್ಡಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್ ಆರ್, ಐಎಎಸ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಾಲಕಿಯರಿಗಾಗಿ ಸಾಮಥ್ರ್ಯ ವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ’ ಕುರಿತು ಮನೋವಿಜ್ಞಾನ ವಿಭಾಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ, ನವದೆಹಲಿ ಜಂಟಿಯಾಗಿ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ವಿ ವೃತ್ತಿಜೀವನಕ್ಕಾಗಿ ಬದ್ದತೆ, ಸಮರ್ಪಣೆ ಮತ್ತು ವೃತ್ತಿ ಗುರಿಗಳನ್ನು ಯೋಜಿಸುವುದು ಬಹಳ ಮುಖ್ಯ. ಕೆಲಸ ಮತ್ತು ಕೌಟುಂಬಿಕ ಜೀವನದ ಸಮತೋಲನದ ಸುಲಭ ನಿರ್ವಹಣೆಗಾಗಿ, ನಾವು ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ನಾನು ಸಮಾಜ ವಿಜ್ಞಾನದ ಹಿನ್ನೆಲೆಯಿಂದ ಬಂದವಳು, ಎಂಜಿನಿಯರ್ ಅಲ್ಲದಿದ್ದರೂ ಮೆಸ್ಕಾಂ ವಿದ್ಯುತ್ ಮಂಡಳಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇನೆ ಎಂದರು.
ಕುಲಸಚಿವ ಪೆÇ್ರ. ಬಸವರಾಜ್ ಡೊಣೂರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ಆಕೆಗೆ ಅಧಿಕಾರ ನೀಡಬೇಕಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ನಾವು ಸರಿಯಾದ ಸಮಯಕ್ಕಾಗಿ ಕಾಯಬಾರದು. ಮಹಿಳಾ ಸಬಲೀಕರಣಕ್ಕೆ ಇದೀಗ ಸರಿಯಾದ ಸಮಯ. ನಮ್ಮ ವಿದ್ಯಾರ್ಥಿನಿಯರನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ನಾವು ಈ ನಿಟ್ಟಿನಲ್ಲಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿನ ಕ್ರಿಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಪ್ರೇರಣಾ ಶ್ರೀಮಾಲ್ ಅವರು ‘ವೈಯಕ್ತಿಕ ಸಾಮಥ್ರ್ಯ ಅಭಿವೃದ್ಧಿ ಮತ್ತು ಸಮಯ ನಿರ್ವಹಣೆ, ಮುಕ್ತ ಫೌಂಡೇಶನ್‍ನ ಸಂಸ್ಥಾಪಕಿ ಡಾ. ಅಶ್ವಿನಿ ಎನ್.ವಿ ಅವರು ಆಂತರಿಕ ಸಂವಹನ ಮತ್ತು ಒತ್ತಡ ನಿರ್ವಹಣೆ’ ಕುರಿತು ಮಾತನಾಡಿದರು. ಅರ್ಬನ್ ಎಥ್ನೋಗ್ರಫರ್ಸ್ ನಿರ್ದೇಶಕಿ ಡಾ. ಪದ್ಮಿನಿ ರಾಮ್ ಅವರು ವೃತ್ತಿಪರ ಸಾಮಥ್ರ್ಯ ವರ್ಧನೆ ಮತ್ತು ಡಾ. ರಾಯಭಾರ ಲಾಬೀ, ಸಹಾಯಕ ಪ್ರಾಧ್ಯಾಪಕರು, ಕ್ರಿಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಬೆಂಗಳೂರು ಅವರು ಸಾಂಸ್ಥಿಕ ನೈಪುಣ್ಯ ಮತ್ತು ಸಾಂಸ್ಥಿಕ ಕೌಶಲ್ಯಗಳ ಕುರಿತು ಮಾತನಾಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮದ ಸಂಚಾಲಕಿ ಡಾ. ಅಕೃತಿ ಶ್ರೀವಾಸ್ತವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯವು ಲಿಂಗ ಸಮಾನತೆಯ ವಾತಾವರಣವನ್ನು ಒದಗಿಸುವಲ್ಲಿ ಸದಾ ಕ್ರಿಯಾಶೀಲವಾಗಿದೆ. ಸಮಾಜದಲ್ಲಿನ ಅನ್ಯಾಯವನ್ನು ಧಿಕ್ಕರಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಹೆಚ್ಚಿಸಲು ವಿಶ್ವವಿದ್ಯಾಲಯ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪೆÇ್ರ. ರೊಮೇಟ್ ಜಾನ್, ಡೀನ್‍ರು, ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.