ಎಂಟಿಬಿ, ವಿಶ್ವನಾಥ್ ಡ್ಯಾನ್ಸ್

ಬೆಂಗಳೂರು,ಸೆ.೧೦- ದೊಡ್ಡಬಳ್ಳಾಪುರದಲ್ಲಿ ನಡೆದಿರುವ ಬಿಜೆಪಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಸ್.ಆರ್. ವಿಶ್ವನಾಥ್ ವೇದಿಕೆಯಲ್ಲಿ ನರ್ತಿಸಿ, ನೆರದಿದ್ದ ಜನಸ್ತೋಮವನ್ನು ರಂಜಿಸಿದರು.
ಸತ್ಯಹರಿಶ್ಚಂದ್ರ ಚಿತ್ರದ ’ಕುಲದಲ್ಲಿ ಮೇಲಾವುದೋ’ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಮತ್ತವರ ಸಂಗಡಿಗರು ಹಾಡಿಗೆ ನರ್ತಿಸಿದ್ದು ಗಮನ ಸೆಳೆಯಿತು.
ಈ ಮಧ್ಯೆ ಬಿಜೆಪಿ ಸರ್ಕಾರದ ೩ ವರ್ಷಗಳ ಸಾಧನೆ ಬಿಂಬಿಸುವ ಜನಸ್ಪಂದನ ಕಾರ್ಯಕ್ರಮಕ್ಕೂ ಮುನ್ನ ಜಾನಪದ ಕಲಾತಂಡಗಳು ಮೆರವಣಿಗೆ ಮೂಲಕ ಆಗಮಿಸಿದ್ದು ಗಮನ ಸೆಳೆಯಿತು.