ಎಂಜಿನಿಯರ್‍ಗಳಿಂದ ದೇಶ ಸದೃಢ: ಬಸವರಾಜ

ಬಳ್ಳಾರಿ ಸೆ 17 : ಎಂಜಿನಿಯರ್‍ಗಳ ದೂರಗಾಮಿ ಆಲೋಚನೆ, ಯೋಜನೆಗಳಿಂದ ಭಾರತ ಇಂದು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸದೃಢವಾಗಿ ಬೆಳೆದಿದೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ವಲಯದ ಪ್ರಾದೇಶಿಕ ನಿರ್ದೇಶಕ ಬಸವರಾಜ ಗಾದಗೆ ತಿಳಿಸಿದರು.
ಅವರು ಜಿಲ್ಲೆಯ ಹೊಸಪೇಟೆಯ ಪ್ರೌಢದೇವರಾಯ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ
ಎಂಜಿನಿಯರ್ ದಿನವನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.ವಿಶ್ವೇಶ್ವರಯ್ಯ ಸೇರಿದಂತೆ ಹಲವು ಎಂಜಿನಿಯರ್‍ಗಳು ಅಂದಿನ ಸರ್ಕಾರದ ಜನಸ್ನೇಹಿ ಆಶಯಗಳನ್ನು ಬಹಳ ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು. ಅದರ ಪ್ರತಿಫಲ ಈಗ ನಮ್ಮ ಮುಂದಿದೆಂದು ಹೇಳಿದರು.
ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ ಮಾತನಾಡಿ. ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‍ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆಂದರು.
ಕಾಲೇಜಿನ ಪ್ರಾಂಶುಪಾಲ ಎಸ್.ಎಂ. ಶಶಿಧರ್ ಅವರು ಮಾತನಾಡಿ ಇಂಜಿನೀಯರ್‍ಗಳು ಬದಲಾವಣೆಯ ಹರಿಕಾರರು ಎಂದು ಬಣ್ಣಿಸಿದರು. ಎ.ವಿ.ವಿಜಯಕುಮಾರ್, ಪರಶುರಾಮ್ ಬಾರಕಿ, ಎಸ್. ಡಿ. ಮಂಜುಳಾ, ಬಸಮ್ಮ ಮೊದಲಾದವರು ಇದ್ದರು.