
ವಿಜಯಪುರ, ಮೇ. 26: ಎಂಜಿನಿಯರುಗಳು ಉದ್ಯೋಗ ಸೃಷ್ಠಿಕರ್ತರಾಗಬೇಕೇ ಹೊರತುಉದ್ಯೋಗ ಹುಡುಕುವಂತಾಗಬಾರದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದ್ದಾರೆ.
ನÀಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್‍ಕಾಲೇಜಿನಲ್ಲಿ ಮೂರು ದಿನಗಳ ಓಪನಡೇ, ಇನವಿಕ್ಟಸ್‍ತಾಂತ್ರಿಕಉತ್ಸವ ಹಾಗೂ ಸಂಭ್ರಮ ವಾರ್ಷಿಕ ದಿನಾಚರಣೆಕಾರ್ಯಕ್ರಮನಡೆಯುತ್ತಿದೆ. ಆಕಾಶಕ್ಕೆ ಬಲೂನನ್ನು ಹಾರಿಸುವ ಮೂಲಕ ಈ ಕಾರ್ಯಕ್ರಮಕ್ಕೆಚಾಲನೆ ನೀಡಿಅವರು ಮಾತನಾಡಿದರು.
ಭಾರತಆರ್ಥಿಕವಾಗಿ, ತಂತ್ರಜ್ಞಾನ ಮತ್ತು ಮೂಲಸೌಕರ್ಯಅಭಿವೃದ್ಧಿ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಎಂಜಿನಿಯರುಗಳ ಪಾತ್ರ ಮಹತ್ವದ್ದಾಗಿದೆ. ಎಂಜಿನಿಯರುಗಳು ಉದ್ಯೋಗ ನೀಡುವ ಉದ್ಯಮಿಗಳಾಗಬೇಕೇ ಹೊರತುಉದ್ಯೋಗ ಹುಡುಕುವಂತಾಗಬಾರದು. ವಿದ್ಯಾರ್ಥಿಗಳು ಇಂದಿನ ಆಧುನಿಕತೆಗೆತಕ್ಕಂತೆ ಸೃಜನಶೀಲರಾಗಬೇಕು. ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆತರಲುಕಾರ್ಯೋನ್ಮುಖರಾಗಬೇಕು. ಭಾರತದಆರ್ಥಿಕತೆ ಮತ್ತು ಸವಾರ್ಂಗೀಣಅಭಿವೃದ್ಧಿಯಲ್ಲಿ ಎಂಜಿನಿಯರುಗಳು ಶೇ. 25 ರಷ್ಟುಕೊಡುಗೆನೀಡುತ್ತಿದ್ದಾರೆ. ಬಿ.ಎಲ್.ಡಿ.ಇಎಂಜಿನಿಯರಿಂಗ್‍ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕಜಗತ್ತಿನಅಗತ್ಯಕ್ಕೆಅನುಗುಣವಾಗಿ ಪೆÇ್ರೀತ್ಸಾಹ ನೀಡುತ್ತಿರುವುದು ಶ್ಲಾಘನೀಯಎಂದುಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳು ತಯಾರಿಸಿದ ಪ್ರಾತ್ಯಕ್ಷತೆ ಪ್ರದರ್ಶನ ವೀಕ್ಷಿಸಿ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯಡಾ. ವಿ. ಜಿ. ಸಂಗಮ ಅವರುಕಾಲೇಜಿನ ಪ್ರಗತಿಯ ಬಗ್ಗೆ ಹಾಗೂ ಮೂರು ದಿನದಕಾರ್ಯಕ್ರಮದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ. ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಉಪಸ್ಥಿತರಿದ್ದರು.