ಎಂಜಿಎಸ್‍ಎಸ್‍ಕೆ ರೈತರ ಜೀವನಾಡಿ

ಭಾಲ್ಕಿ:ಸೆ.26: ಇಲ್ಲಿಯ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾರಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಹೇಳಿದರು. ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರಖಾನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 32ನೆಯ ವಾಷಿರ್ಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರ ಮತ್ತು ಕಾರ್ಮಿಕರ ಸಹಕಾರದಿಂದ ಸಕ್ಕರೆ ಕಾರಖಾನೆ ಪ್ರಗತಿ ಸಾಧಿಸುತ್ತಿದೆ. ಕಳೆದ ಸಾಲಿನಲ್ಲಿ ಕಬ್ಬು ಸಾಗಿಸಿದ ಎಲ್ಲ ರೈತರ ಖಾತೆಗೆ ಹಣ ಸಂದಾಯ ಮಾಡಲಾಗಿದೆ. ಮುಂಬರುವ ದಿನಗಳಲ್ಲಿಯು ಜಿಲ್ಲೆಯ ರೈತರು ಸಕಾಲಕ್ಕೆ ಕಬ್ಬು ಸಾಗಿಸಿ ಕಾರಖಾನೆಯ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾರಖಾನೆ ನಿರ್ದೇಶಕರಾದ ಬಾಬುರಾವ ಪಾಟೀಲ್, ಬಾಬುರಾವ ತುಂಬಾ, ಶಿವಶಂಕರ ಪಾಟೀಲ್, ಲಿಯಾಖತ ಅಲಿ, ಶಂಕರ ಚವ್ಹಾಣ, ಅಶೋಕ ಕೋಟೆ, ಸಂಗ್ರಾಮ ಮುದ್ದಾಳೆ, ಸುರೇಖಾ ಶೆಟಕಾರ್, ನಳಿನಿ ಪಾಟೀಲ್, ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಣ್ಣ, ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ ಕೋಟೆ ಇದ್ದರು.