ಎಂಐಟಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

ನಂಜನಗೂಡು ಜೂ.23:- ತಾಂಡವಪುರ ಎಂಐಟಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ 25 ನೇ ತಾರೀಕು ಆಯೋಜಿಸಲಾಗಿದೆ ಎಂದು ಡಾಕ್ಟರ್ ವೈಟಿ ಕೃಷ್ಣೇಗೌಡ ಪ್ರಾಂಶುಪಾಲರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಮಾತು ಮುಂದುವರಿಸಿ ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿರುವ ಸಮಸ್ಯೆಯಾಗಿದ್ದು ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲಕರ ವೇದಿಕೆಯನ್ನು ಒದಗಿಸಲು ಯಾವಾಗಲೂ ಶ್ರಮಿಸುತ್ತಿದೆ 25ನೆಯ ದಿನಾಂಕ ಶನಿವಾರ ರಂದು ಮೈಸೂರಿನ ಲೀಡ್ ಟ್ರೈನಿಂಗ್ ಅಂಡ್ ಕಾಪೆÇೀರೇಟ್ ಸಲ್ಯೂಷನ್ಸ್ ನವರ ಸಹಯೋಗದೊಂದಿಗೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಸುಮಾರು 50 ಹೆಚ್ಚು ಕಂಪನಿಗಳು ಭಾಗವಹಿಸುತ್ತೇವೆ 10ನೇ ತರಗತಿ ದ್ವಿತೀಯ ಪಿಯುಸಿ ಪಾಲಿಟೆಕ್ನಿಕ್ ಡಿಪೆÇ್ಲೀಮೋ ಐಟಿಐ ಹಾಗೂ ಯಾವುದೇ ಪದವಿಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ನೀಡುತ್ತಿದ್ದು ಆಯ್ಕೆಗೊಂಡ ಅಭ್ಯರ್ಥಿಗಳ ಜೀವನಮಟ್ಟ ಸುಧಾರಣೆ ಯಾಗಿ ಸ್ವಾವಲಂಬನೆ ಬದುಕಿಗೆ ಮುಂದಾಗಬೇಕೆಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪೆÇ್ರಫೆಸರ್ ರಾಘವೇಂದ್ರ ಸಿಇಓ ಶ್ರೀವಿದ್ಯಾ ಇದ್ದರು.