ಎಂಎಸ್ ಬಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ದಾವಣಗೆರೆ.ಮಾ.೨೦; ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ದಾವಣಗೆರೆ ಜಿಲ್ಲಾಮಟ್ಟದ ಗುಂಪು ಆಟಗಳು ಮತ್ತು ವೈಯಕ್ತಿಕ ಆಟಗಳ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಬಾಲಕಿಯರ ವಾಲಿಬಾಲ್ ಸ್ಪರ್ಧೆಯಲ್ಲಿ ಅಮೂಲ್ಯ ಕೆ, ಧನುಜ ಹೆಚ್ ಎನ್, ಬಾಲಕರ ಟೆನಿಕಾಯ್ಟ್ ಸ್ಪರ್ಧೆಯಲ್ಲಿ ವಿ ದಯನಂದ, ಸಂದೀಪ್ ಎಚ್ ಆರ್, ಪವನ್ ಟಿ ಎಮ್, ಕೋಟ್ರೆಶ್ ಐ ಎಂ, ಬಾಲಕೀಯರ ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಸೌಂದರ್ಯ ಆರ್ ರಾಯ್ಕರ್, ಸ್ಪಂದನಾ ಎಸ್, ಸಂಕೇತ ಕೆ ಎ, ಬಾಲಕೀಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಕಲ್ಪನಾ ನಾಗಪ್ಪ ಅರಟಾಳ್, ತೇಜಸ್ವಿನಿ ಎನ್ ಕುಂಬಾರ್, 5000 ಮೀ ಸ್ಲೋ ವಾಕ್ ರೇಸ್ ಬಾಲಕರ ಸ್ಪರ್ಧೆಯಲ್ಲಿ ಜಿತೇಂದ್ರ ಬಿ ಪಿ ಈ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ಗೌರವ ಕಾರ್ಯದರ್ಶಿಗಳಾದ ಎಂ ಬಿ ಸಂಗಮೇಶ್ವರ ಗೌಡರು, ನಿರ್ದೇಶಕರಾದ ಡಾ. ಜಿ ಎನ್ ಹೆಚ್ ಕುಮಾರ್, ಪ್ರಾಚಾರ್ಯರಾದ ಪ್ರಸಾದ್ ಬಂಗೇರಾ ಎಸ್, ಕ್ರೀಡಾ ಕಾರ್ಯದರ್ಶಿಗಳಾದ ಶೇಖರ್ ಪಿ ಎಂ, ದೀಪಾ ಕೆ ಎನ್, ಶಿವಪ್ರಸಾದ್ ಟಿ ಎಸ್ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.